
ಬಿಗ್‌ಬಾಸ್ 12ರ ಸ್ಪರ್ಧಿಗಳು
ಚಿತ್ರ: ಜಿಯೋ ಹಾಟ್‌ಸ್ಟಾರ್
ಕನ್ನಡದ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ. 13 ಸ್ಪರ್ಧಿಗಳ ಪೈಕಿ ಈ ವಾರ 7 ಮಂದಿ ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ ಬಿಗ್‌ಬಾಸ್ ಎಲಿಮಿನೇಷ್‌ನಲ್ಲಿ ಟ್ವಿಸ್ಟ್ ಒಂದು ಇರಲಿದೆ.
75ನೇ ದಿನಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್ ಸ್ಪರ್ಧಿಗಳಿಗೆ ವಾರದ ಕೊನೆಯಲ್ಲಿ ಟ್ವಿಸ್ಟ್ ಒಂದನ್ನು ನೀಡಲಾಗಿದ್ದು,ಈ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಈ ವಾರ ಸ್ಪರ್ಧಿಗಳು ನಾಮಿನೇಟ್ ಆದರು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದಿಲ್ಲ. ಏಕೆಂದರೆ ಈ ವಾರ ವೋಟಿಂಗ್ ಲೈನ್ ತೆರೆದಿಲ್ಲ. ಹೀಗಾಗಿ ನಾಮಿನೇಟ್ ಆದವರು ಯಾವ ಸ್ಪರ್ಧಿಯೂ ಹೊರ ಬರುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ.
ಈ ವಾರ ಗಿಲ್ಲಿ ನಟ, ರಜತ್, ಧ್ರುವಂತ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಇನ್ನು ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಒಬ್ಬರನ್ನು ರಹಸ್ಯ ಕೋಣೆಗೆ ಕಳಿಸುತ್ತಾರಾ ಅಥವಾ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.