
ರಾಶಿಕಾ, ಸೂರಜ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ 75ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್‌ಬಾಸ್ ಮನೆಯಲ್ಲಿ ರಾಶಿಕಾ ಹಾಗೂ ಸೂರಜ್ ಮಧ್ಯೆ ಗಲಾಟೆ ನಡೆದಿದೆ. ಇನ್ಮೇಲೆ ಎಲ್ಲರ ಮುಖವಾಡ ಆಚೆ ಬರುತ್ತೆ ಎಂದ ರಾಶಿಕಾಗೆ ಸೂರಜ್ ತರಾಟೆ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಯಾವ ಸಂದರ್ಭದಲ್ಲಿ ಏನೂ ಬೇಕಾದರೂ ಆಗಬಹುದು. ಇಂದು ಗೆಳಯರಾಗಿದ್ದವರು ನಾಳೆ ವೈರಿಗಳು ಆಗಬಹುದು. ಅದಕ್ಕೆ ಮತ್ತೊಂದು ಉದಾಹರಣೆ ಎಂದರೆ ಸೂರಜ್ ಹಾಗೂ ರಾಶಿಕಾ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಶಿಕಾ ಕ್ಯಾಪ್ಟನ್ ಆಗುವುದು ಸೂರಜ್‌ಗೆ ಇಷ್ಟ ಇರಲಿಲ್ಲ. ಈ ಬಗ್ಗೆ ಖುದ್ದು ಸೂರಜ್ ಹೇಳಿದ್ದು ರಾಶಿಕಾ ಕಿವಿಗೆ ಬಿದ್ದಿದೆ. ರಾಶಿಕಾ ಕ್ಯಾಪ್ಟನ್ ಆಗುತ್ತಿದ್ದಂತೆ ಮುಖಾಮುಖಿಯಾಗಿ ಎಲ್ಲರ ಮುಂದೆಯೇ ಈ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.
‘ಇನ್ಮೇಲೆ ಮುಖವಾಡ ಆಚೆ ಬರುತ್ತೆ. ನಾನು ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಅಂತ ಹೇಳಿ, ಮತ್ತೆ ನನಗೆ ವಿಶ್ ಮಾಡೋದಕ್ಕೆ ಏಕೆ ಬಂದೆ’ ಎಂದು ರಾಶಿಕಾ ಪ್ರಶ್ನೆ ಮಾಡುವುದು ಪ್ರೊಮೊದಲ್ಲಿದೆ. ಬಳಿಕ ಸೂರಜ್, ‘ಕ್ಯಾಪ್ಟನ್ ಅಂದರೆ ಸ್ವಂತ ಬುದ್ಧಿ ಇರಬೇಕು. ಮುಂಚೆ ಬಂದಾಗ ಒಂದು ಥರ, ಇನ್ನೊಬ್ಬರು ಬಂದಾಗ ಇನ್ನೊಂದು ರೀತಿ ಮಾಡೋದನ್ನು ಎಲ್ಲರೂ ನೋಡುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.