(ಚಿತ್ರ–@ColorsKannada)
Bigg Boss Kannada 12: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12, ಸೆಪ್ಟೆಂಬರ್ 28ರಂದು ಸಂಜೆ 6 ಕ್ಕೆ ಆರಂಭವಾಗಲಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ಕಲರ್ಸ್ ಕನ್ನಡ ವಾಹಿನಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
ಪ್ರೋಮೋನಲ್ಲಿ ಎಪಿಸೋಡ್ ಪ್ರಸಾರವಾಗುವ ಸಮಯ ಘೋಷಣೆ ಮಾಡಲಾಗಿದೆ. ಜತೆಗೆ ಸುದೀಪ್ ಆಸಕ್ತಿಕರ ಕಾಗೆ-ನರಿಯ ಕಥೆಯೊಂದನ್ನು ಹೇಳಿದ್ದಾರೆ.
ಈ ಸಲ ನೀವಿದ್ದೀರಾ, ನೀವಿದ್ದೀರಾ ಅಂತಾ ಕೇಳುತ್ತಿದ್ದವರು ಈಗ, ನೆಕ್ಸ್ಟ್ ಏನು, ನೆಕ್ಸ್ಟ್ ಏನು ಎಂದು ಕೇಳ್ತಿದ್ದೀರಾ. ಒಂದು ಕಥೆ ಹೇಳಲೇ?... ಒಂದೂರಲ್ಲಿ ಒಂದು ಕಾಗೆ ಇತ್ತು. ನೀವು ಸ್ಕೂಲಲ್ಲಿ ಕೇಳಿದ್ದೀರಲ್ಲ. ಅದೇ ಕಥೆ. ಆ ಕಾಗೆಗೆ ಹಸಿವಾದಾಗ ವಡೆ ಮಾಡುತ್ತಿದ್ದ ಅಜ್ಜಿಯ ಹತ್ತಿರ ಹೋಗಿ ಅಜ್ಜಿ ಅಜ್ಜಿ ನನಗೊಂದು ವಡೆ ಕೊಡ್ತಿಯಾ ಅಂತಾ ಕೇಳ್ತು. ಅಜ್ಜಿ ಪ್ರೀತಿಯಿಂದ ಒಂದು ವಡೆ ಕೊಡ್ತಾರೆ. ಕಾಗೆ ಆ ವಡೆನ ತಗೊಂಡು ಹಾರಿಕೊಂಡು ಹೋಗಿ ಒಂದು ಮರದ ಮೇಲೆ ಕುಳಿತು ಇನ್ನೇನು ತಿನ್ಬೇಕು ಒಬ್ಬನ ಎಂಟ್ರಿ. ವಿಲ್ಲನ್
ಕಾಗೆ ಬಾಯಲ್ಲಿದ್ದ ವಡೆನ ಕಿತ್ಕೊಳ್ಳೋಕೆ ಸ್ಕೆಚ್ ಹಾಕಿದ್ದ ನರಿ ಕಾಗಕ್ಕ ಕಾಗಕ್ಕ ನೀನು ಕೋಗಿಲೆ ತರ ಹಾಡು ಹಾಡ್ತಿಯಾ ನನಿಗೋಸ್ಕರ ಒಂದು ಹಾಡು ಅಂತಾ ಹೇಳ್ತು.
ನಿಮೆಗೆಲ್ಲ ಗೊತ್ತಿರುವ ಹಾಗೆ ಕಾಗೆ ನರಿ ಮಾತು ಕೇಳೋಕು, ಹಾಡು ಹಾಡೋಕು, ವಡೆ ಕಾಗೆ ಬಾಯಿಂದ ಬಿದ್ದು, ನರಿ ಬಾಯಿಗೆ ಸೇರಬೇಕು ಎನ್ನುವಾಗ... ನಿಮಗೆಲ್ಲಾ ಕ್ಲೈಮ್ಯಾಕ್ಸ್ ಗೊತ್ತಿದೆ ಅಂದುಕೊಂಡ್ರೆ ಓ ಭ್ರಮೆ.. ಈ ಸಲ ಬಿಗ್‌ಬಾಸ್ ಹಾಗೆನೇ. ನಾವು 11 ಸೀಸನ್ ನೋಡಿದಿವಿ. ನಮಗೆ ಬಿಗ್‌ಬಾಸ್ ಬಗ್ಗೆ ಎಲ್ಲಾ ಗೊತ್ತು ಅನ್ನೋರಿಗೆ 'ಓ ಭ್ರಮೆ..' ಎಂದಿದ್ದಾರೆ ಸುದೀಪ್.
ಇನ್ನು ಬಿಗ್‌ಬಾಸ್ ಸೀಸನ್ 12 ಸೆಪ್ಟೆಂಬರ್ 28, ಸಂಜೆ 6ಕ್ಕೆ ಪ್ರಸಾರ ವಾಗಲಿದೆ. ಪ್ರತಿ ದಿನದ ಎಪಿಸೋಡ್ ರಾತ್ರಿ 9:30 ರಿಂದ 10:30ರ ವರೆಗೆ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.