
ನಟ ಶೈನ್ ಶೆಟ್ಟಿ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ನಟ ಶೈನ್ ಶೆಟ್ಟಿ ಅವರು ಬಿಗ್‌ಬಾಸ್ ಸೀಸನ್ 7ರ ಟ್ರೋಫಿ ಗೆದ್ದು ನಿನ್ನೆಗೆ (ಫೆ.2) 6 ವರ್ಷ ಭರ್ತಿಯಾಗಿದೆ. ಇದೇ ಖುಷಿಯಲ್ಲಿ ನಟ ಶೈನ್ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಡೀ ಬಿಗ್‌ಬಾಸ್ ತಂಡಕ್ಕೆ ಹಾಗೂ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ನಟ ಶೈನ್ ಶೆಟ್ಟಿ ಅವರು ಬಿಗ್‌ಬಾಸ್ ಸೀಸನ್ 7ರಲ್ಲಿ ಗೆದ್ದ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಅದರ ಜೊತೆಗೆ ‘ಅಂದು 02-02-2020 to ಇಂದು 02-02-2026. ಕಲಾಭಿಮಾನಿಗಳಿಗೆ, ಕಲರ್ಸ್ ಕನ್ನಡ ವಾಹಿನಿಗೆ, ಡಿಜೆ ಸರ್, ಪರಮೇಶ್ವರ್ ಗುಂಡ್ಕಲ್ ಸರ್ ಮತ್ತು ನಮ್ಮ ಬಿಗ್‌ಬಾಸ್‌ನ ಬಿಗ್ ಬ್ರದರ್ ಕಿಚ್ಚ ಸುದೀಪ್ ಸರ್‌ಗೆ ನಾನು ಸದಾ ಚಿರಋಣಿ’ ಎಂದಿದ್ದಾರೆ.
‘ನೀವು ಕೊಟ್ಟ ಬಿಗ್‌ಬಾಸ್ ಪಟ್ಟಕ್ಕೆ ಇವತ್ತು 6 ವರ್ಷ. ನೀವು ನನ್ನ ಮೇಲೆ ಇಟ್ಟ ನಂಬಿಕೆ ಪ್ರೀತಿಗೆ ಇವತ್ತು 6 ವರ್ಷ. ನಾನು ಅವತ್ತಿನಿಂದ ಕಟ್ಟಿಟ್ಟುಕೊಂಡ ಕನಸು ನನಸಾಗೋದಕ್ಕೆ ತಗೊಂಡಿದ್ದು 6 ವರ್ಷ. ಒಂದು ಹೊಸ ನಿರ್ಮಾಣ ಸಂಸ್ಥೆ, ಅದರಲ್ಲಿ ನನಸಾಗೋದಕ್ಕೆ ಹೊರಟಿರೋದು ಹಲವಾರು ಕನಸುಗಳು, ಅದನ್ನೆಲ್ಲ ನಿಮ್ಮ ಮುಂದೆ ಈ ವರ್ಷ ತಗೊಂಡು ಬರ್ತೀನಿ. ಥಿಯೇಟರ್ ಅಲ್ಲಿ ಸಿಗುವ ಪ್ರೀತಿ ಇರಲಿ. ಶೈನ್ ಶರಶ್ ಶೆಟ್ಟಿ’ ಎಂದು ಬರೆದುಕೊಂಡಿದ್ದಾರೆ.
ಶೈನ್ ಶೆಟ್ಟಿ
ಬಿಗ್‌ಬಾಸ್ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಶೈನ್ ಶೆಟ್ಟಿ ಅವರು ಬ್ಲಾಕ್‌ಬಸ್ಟರ್ ‘ಕಾಂತಾರ’, ‘ಜಸ್ಟ್ ಮ್ಯಾರೀಡ್’, ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅವರು ‘ಏಕಂ’ ಎಂಬ ವೆಬ್ ಸರಣಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.