ಚಿತ್ರ: ಕಲರ್ಸ್ ಕನ್ನಡ ಇಸ್ಟಾಗ್ರಾಮ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಶುರುವಾಗಿ ಒಂದು ದಿನ ಕಳೆದಿದೆ. ಆದರೆ ಬಿಗ್‌ಬಾಸ್ ಅರಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ 19 ಸ್ಪರ್ಧಿಗಳಿಗೆ ಅಚ್ಚರಿ ಎದುರಾಗಿದೆ.
ಮಂಜು ಭಾಷಿಣಿ, ನಟಿ ರಾಶಿಕಾ
ಹೌದು, ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೇ ಕಿಚ್ಚ ಸುದೀಪ್ ಅವರು ಮೀಟರ್ ವೋಟಿಂಗ್ ಮೂಲಕ ಜಂಟಿ ಹಾಗೂ ಒಂಟಿ ಎಂಬ ಪರಿಕಲ್ಪನೆಯಿಂದ ಕಾರ್ಯಕ್ರಮವನ್ನು ಶುರು ಮಾಡಿದ್ದರು. ಇದೀಗ ಬಿಗ್ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಬಿಗ್‌ಬಾಸ್ 19 ಸ್ಪರ್ಧಿಗಳಿಗೂ ಎಲಿಮಿನೇಷನ್ ಶಾಕ್ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಆ ಪ್ರೊಮೋದಲ್ಲಿ ಬಿಗ್‌ಬಾಸ್ ವಿಜೇತರಿಗಾಗಿ 100 ದಿನ ಕಾಯಬೇಕಿಲ್ಲ. ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಅಚ್ಚರಿ ಮೂಡಿಸಿದ್ದಾರೆ.
ಬಿಗ್‌ಬಾಸ್ ಹೇಳಿದ್ದೇನು?
‘ಈ ಸೀಸನ್ನಲ್ಲಿ ಯಾರು ಗೆಲ್ತಾರೆ ಎಂದು ನೋಡೋದಕ್ಕೆ 100 ದಿನಗಳ ಕಾಲ ಕಾಯಬೇಕಿಲ್ಲ. ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ. ನಿಮ್ಮಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು. ಗುಂಪು ಗುಂಪಾಗಿಯೂ ಎಲಿಮಿನೇಟ್ ಆಗಬಹುದು. ಎಲಿಮಿನೇಷನ್ ಭಯದಿಂದ ಮುಕ್ತರಾಗಬೇಕು ಅಂದರೆ.. ಅದಕ್ಕೆ ಇರೋದು ಒಂದೇ ದಾರಿ..’ ಎಂದು ಬಿಗ್‌ಬಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.