ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 5:57 IST
Last Updated 14 ಫೆಬ್ರುವರಿ 2026, 5:57 IST
<div class="paragraphs"><p>ನೃತ್ಯ ಸಂಯೋಜಕ ರುದ್ರ ಮಾಸ್ಟರ್‌</p></div>

ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

   

ಚಿತ್ರ: ಇನ್‌ಸ್ಟಾಗ್ರಾಂ

ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ರಿಯಾಲಿಟಿ ಶೋನಲ್ಲಿ ನೃತ್ಯ ಸಂಯೋಜಕರಾಗಿ ಖ್ಯಾತಿ ಪಡೆದುಕೊಂಡಿರುವ ರುದ್ರ ಮಾಸ್ಟರ್‌ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ರುದ್ರ ಅವರು ಸದ್ದಿಲ್ಲದೆ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ADVERTISEMENT

ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

ಇದೀಗ ನೃತ್ಯ ಸಂಯೋಜಕ ರುದ್ರ ಮಾಸ್ಟರ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ರುದ್ರ ಮಾಸ್ಟರ್‌ ಮನೆಯಲ್ಲಿ ಹಳದಿ ಶಾಸ್ತ್ರ ಹಾಗೂ ಸಂಗೀತ ಶಾಸ್ತ್ರಗಳು ಮುಗಿದಿದ್ದು, ಅದೇ ವಿಡಿಯೊಗಳು ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

ರುದ್ರ ಮಾಸ್ಟರ್‌ ಅವರು ಮದುವೆ ಆಗುತ್ತಿರುವ ಹುಡುಗಿಯ ಹೆಸರು ನಿರೀಕ್ಷಾ. ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರುದ್ರ ಮಾಸ್ಟರ್‌ ಅವರೇ ರಿವೀಲ್‌ ಮಾಡಬೇಕಿದೆ. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನವ ಜೋಡಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ.

ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

ರುದ್ರ ಮಾಸ್ಟರ್‌ ಅವರು ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಜನಪ್ರಿಯ ರಿಯಾಲಿಟಿ ಶೋನಲ್ಲಿ ನೃತ್ಯ ಸಂಯೋಜಕರಾಗಿ ಪ್ರೇಕ್ಷಕರ ಮನೆ ಮಾತಾಗಿದ್ದಾರೆ. ತಮ್ಮ ಕೆಲಸದಲ್ಲಿ ಸದಾ ಸಕ್ರಿಯರಾಗಿರುವ ಮಾಸ್ಟರ್ ಈಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ.

ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.