ADVERTISEMENT

ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾದ ‘ಕಾಮಿಡಿ ಕಿಲಾಡಿಗಳು ಸೀಸನ್–5’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2025, 6:33 IST
Last Updated 24 ಅಕ್ಟೋಬರ್ 2025, 6:33 IST
<div class="paragraphs"><p>ಯೋಗರಾಜ್ ಭಟ್, ಹಿರಿಯ ನಟಿ ತಾರಾ, ಜಗ್ಗೇಶ್</p></div>

ಯೋಗರಾಜ್ ಭಟ್, ಹಿರಿಯ ನಟಿ ತಾರಾ, ಜಗ್ಗೇಶ್

   

ಜೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಶೋ ಅನ್ನು ಮತ್ತೆ ತೆರೆಗೆ ತಂದಿದೆ. ರಾಜ್ಯದ ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿರುವ ಈ ಕಾರ್ಯಕ್ರಮ ಅಕ್ಟೋಬರ್ 25ರ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ ಹಾಗೂ ಪ್ರತಿ ವಾರಾಂತ್ಯದಲ್ಲಿ ಪ್ರಸಾರ ಕಾಣಲಿದೆ.

ಹಿರಿಯ ನಟಿ ತಾರಾ, ನಟ ಜಗ್ಗೇಶ್, ಯೋಗರಾಜ್ ಭಟ್, ನಿರಂಜನ್ ದೇಶಪಾಂಡೆ

ADVERTISEMENT

ಈ ಬಾರಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ನಿರಂಜನ್ ದೇಶಪಾಂಡೆ ವಹಿಸಿಕೊಂಡಿದ್ದಾರೆ. ಈ ನಗುವಿನ ಪಯಣದ ಸಾರಥಿಗಳಾಗಿ ಕಾಮಿಡಿ ಕಿಂಗ್ ಜಗ್ಗೇಶ್, ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಮತ್ತು ಹಿರಿಯ ನಟಿ ತಾರಾ ಅನುರಾಧ ಇರಲಿದ್ದಾರೆ.

ಜೀ ಕನ್ನಡ ವಾಹಿನಿ ಪ್ರೇಕ್ಷಕರನ್ನು ನಕ್ಕು ನಗಿಸಲು 'ಕಾಮಿಡಿ ಕಿಲಾಡಿಗಳು' ಹೊಸ ಸೀಸನ್ ಅನ್ನು ತರಲು ಸಜ್ಜಾಗಿದೆ. ಈ ಶೋನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ನವ ಹಾಸ್ಯ ನಟರು ಪಾಲ್ಗೊಳ್ಳಲಿದ್ದು, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲು ಸಿದ್ಧರಾಗಿದ್ದಾರೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನೂತನ ಕಥೆಗಳನ್ನೂ ಈ ಪ್ರತಿಭೆಗಳು ಪ್ರದರ್ಶಿಸಲಿದ್ದಾರೆ.

‘ಈ ಸೀಸನ್ ನ ಕಾಮಿಡಿ ಕಿಲಾಡಿಗಳು ಕ್ರಿಯೇಟಿವಿಟಿ ಮತ್ತು ಹೊಸತನದ ಪ್ರತಿರೂಪವಾಗಿದೆ. ಪ್ರತೀ ಸಂಚಿಕೆಯಲ್ಲೂ ಹಾಸ್ಯ, ತರ್ಲೆ, ನಗುವಿನ ಚಟಾಕಿ ಇರಲಿದೆ. ಹೊಸಪ್ರತಿಭೆಗಳು ಕಾಮಿಡಿ ಕಥೆಗಳ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ’ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.