ADVERTISEMENT

10ರಂದು ‘ಗಾನಾ ಬಜಾನಾ’ ಗ್ರ್ಯಾಂಡ್ ಫಿನಾಲೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 9:59 IST
Last Updated 7 ಏಪ್ರಿಲ್ 2022, 9:59 IST
ವಿಶೇಷ ಕಾರ್ಯಕ್ರಮಗಳ ಪೋಸ್ಟರ್‌
ವಿಶೇಷ ಕಾರ್ಯಕ್ರಮಗಳ ಪೋಸ್ಟರ್‌   

ಸ್ಟಾರ್ ಸುವರ್ಣದಲ್ಲಿ ಭಾನುವಾರ (ಏ. 8) ಸಂಜೆಯಿಂದ ಮನೋರಂಜನೆ ರಸದೌತಣ ವೀಕ್ಷಕರಿಗೆ ಸಿಗಲಿದೆ. ಅಂದು ಸಂಜೆ 6 ಗಂಟೆಗೆಮಿಲನ ನಾಗರಾಜ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್ ಅಭಿನಯದ ‘ಲವ್ ಮಾಕ್ಟೇಲ್ 2’ ಪ್ರಸಾರವಾಗಲಿದೆ.

ರಾತ್ರಿ 9ಕ್ಕೆ ‘ಗಾನಾ ಬಜಾನಾ’ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ‘ಫ್ಯಾಮಿಲಿ ಪ್ಯಾಕ್’ ಮತ್ತು ‘ಇಂಗ್ಲಿಷ್ ಮಂಜ’ ಚಿತ್ರ ತಂಡದವರು ಭಾಗವಹಿಸಲಿದ್ದಾರೆ.

‘ಫ್ಯಾಮಿಲಿ ಪ್ಯಾಕ್’ ತಂಡದಿಂದ ಅಮೃತ ಅಯ್ಯಂಗಾರ್, ಲಿಖಿತ್ ಶೆಟ್ಟಿ, ಶರ್ಮಿತಾ ಶೆಟ್ಟಿ, ವಿರಾಜ್ ಗಾನ ಬಜಾನದ ವೇದಿಕೆಯಲ್ಲಿ ಸದ್ದು ಮಾಡಲಿದ್ದಾರೆ.

ADVERTISEMENT

ಪ್ರಮೋದ್, ನಾಗೇಂದ್ರ ಪ್ರಸಾದ್, ತೇಜಸ್ವಿನಿ, ನಾಗೇಂದ್ರ ಅರಸ್ ‘ಇಂಗ್ಲೀಷ್ ಮಂಜ’ ಚಿತ್ರ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ವಾಹಿನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.