
ನಟಿ ಪ್ರತಿಮಾ ಠಾಕೂರ್
ಚಿತ್ರ:ಇನ್‌ಸ್ಟಾಗ್ರಾಂ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿ ನಟಿ ಪ್ರತಿಮಾ ಠಾಕೂರ್ ತಮ್ಮ 21ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ವಿದ್ಯಾ ಪಾತ್ರದಲ್ಲಿ, ತ್ರಿವಿಕ್ರಂ ಅವರ ಪತ್ನಿಯಾಗಿ ನಟಿಸುತ್ತಿದ್ದಾರೆ.
ನಟಿ ಪ್ರತಿಮಾ ಠಾಕೂರ್
ಇತ್ತೀಚೆಗೆ (ಫೆ.3) ನಟಿ ಪ್ರತಿಮಾ ಠಾಕೂರ್ ಅವರು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದೇ ವಿಡಿಯೊವನ್ನು ನಟಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಪ್ರತಿ ವರ್ಷದ ಹುಟ್ಟುಹಬ್ಬವೂ ನನ್ನ ಯಶಸ್ಸಿನ ಮತ್ತೊಂದು ಮೈಲಿಗಲ್ಲನ್ನು ಸೂಚಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ನಟಿ ಪ್ರತಿಮಾ ಠಾಕೂರ್ ಹಾಗೂ ಮುದ್ದು ಸೊಸೆ ಧಾರಾವಾಹಿ ತಂಡದವರು
ನಟಿ ಪ್ರತಿಮಾ ಠಾಕೂರ್ ಅವರ ಹುಟ್ಟುಹಬ್ಬದಲ್ಲಿ ಕುಟುಂಬಸ್ಥರು, ಸ್ನೇಹಿತರು ಮುದ್ದು ಸೊಸೆ ಧಾರಾವಾಹಿಯ ಇಡೀ ತಂಡದವರು ಭಾಗಿಯಾಗಿದ್ದರು. ಇವರೆಲ್ಲರ ಜೊತೆಗೆ ನಟಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಆದರೆ ನಟಿ ಹುಟ್ಟುಹಬ್ಬದ ಸಂಭ್ರಮದಲ್ಲಿ ತ್ರಿವಿಕ್ರಂ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ತ್ರಿವಿಕ್ರಂ ಎಲ್ಲಿ ಎಂದು ಕಮೆಂಟ್ಸ್ ಹಾಕಿದ್ದಾರೆ.
ʻಅಂತರಪಟʼ, ʻದೊರೆಸಾನಿʼ ಸೇರಿದಂತೆ ಇನ್ನಷ್ಟು ಧಾರಾವಾಹಿಗಳಲ್ಲಿ ಪ್ರತಿಮಾ ಅವರು ನಟಿಸಿದ್ದಾರೆ. ಆದರೆ ʻಮುದ್ದು ಸೊಸೆʼ ಧಾರಾವಾಹಿಯಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟು ತಮ್ಮ ಮುದ್ದಾದ ಅಭಿನಯದ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ. ಪ್ರಸ್ತುತ ಕನ್ನಡದ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮುದ್ದುಸೊಸೆ ಧಾರಾವಾಹಿಯು ಮಂಡ್ಯ ಭಾಷೆಯ ಹಳ್ಳಿ ಸೊಗಡಿನ ಕಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.