ADVERTISEMENT

ಬಿಗ್‌ಬಾಸ್‌ನಿಂದ ಬಂದ ಅಶ್ವಿನಿ ಗೌಡಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 10:48 IST
Last Updated 24 ಜನವರಿ 2026, 10:48 IST
<div class="paragraphs"><p>ಅಶ್ವಿನಿ ಗೌಡ ಸಹೋದರ</p></div>

ಅಶ್ವಿನಿ ಗೌಡ ಸಹೋದರ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಎರಡನೇ ರನ್ನಪ್‌ ಆಗಿದ್ದ ಅಶ್ವಿನಿ ಗೌಡ ಅವರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆ ಸುಂದರ ಕ್ಷಣವನ್ನು ಸೆರೆ ಹಿಡಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಅಶ್ವಿನಿ ಗೌಡ ಹಂಚಿಕೊಂಡಿದ್ದಾರೆ.

ADVERTISEMENT

ವಿಡಿಯೊ ಜೊತೆಗೆ ‘ಬಿಗ್‌ಬಾಸ್ ಮನೆಯ ರಾಜಮಾತೆಯನ್ನು ಹಿತೈಷಿಗಳು ಸ್ವಾಗತಿಸಿ ಮುಂದಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಇನ್ನಷ್ಟು ಯಶಸ್ಸು ಕಾಣಲೆಂದು ಶುಭ ಕೋರಿದರು’ ಎಂದು ಬರೆದುಕೊಂಡಿದ್ದಾರೆ. 16 ವಾರಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದ ಅಶ್ವಿನಿ ಗೌಡ ಅವರು ಎರಡನೇ ರನ್ನಪ್‌ ಆಗಿ ಹೊರ ಹೊಮ್ಮಿದ್ದರು.

ಅಶ್ವಿನಿ ಗೌಡ

ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಅಶ್ವಿನಿ ಗೌಡ ಅವರು ಉತ್ತಮ ಸ್ಪರ್ಧಿಯಾಗಿದ್ದರು. ಎಲ್ಲಾ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ ಸಹ ಸ್ಪರ್ಧಿಗಳ ಜೊತೆಗೆ ಜೋರು ಗಲಾಟೆ ಸಹ ಮಾಡಿಕೊಂಡಿದ್ದರು. ಆದರೆ ಶೋ ಕೊನೆಯಲ್ಲಿ ಅಶ್ವಿನಿ ಗೌಡ ಅವರು ಎಲ್ಲರಿಗೂ ಕ್ಷಮೆ ಕೇಳಿದ್ದರು. ಸದ್ಯ ಬಿಗ್‌ಬಾಸ್‌ ಮನೆಯಿಂದ ಹೊಬಂದ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.