ಕಿರುತೆರೆ ನಟಿ ವೈಷ್ಣವಿ ಗೌಡ
ಸೀತಾ ಪಾತ್ರದ ಮೂಲಕ ಗಮನ ಸೆಳೆದಿದ್ದ ಕನ್ನಡದ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ.
ನಟಿ ವೈಷ್ಣವಿಗೆ ಶುಭಕೋರಿದ ಪತಿ ಅನುಕೂಲ್ ಮಿಶ್ರಾ
ವೈಷ್ಣವಿಗೆ ಶುಭಕೋರಿದ ಪತಿ ಅನುಕೂಲ್ ಮಿಶ್ರಾ ಅವರು, ‘ನನ್ನ ಜೀವನದ ಅತಿ ಮುಖ್ಯವಾದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಶುಭಾಶಯಗಳ ಮಹಾಪೂರ
ವೈಷ್ಣವಿ ಹುಟ್ಟುಹಬ್ಬಕ್ಕೆ ಅನೇಕರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಶುಭಕೋರಿದ್ದಾರೆ.
ಧಾರಾವಾಹಿಯಲ್ಲಿ ವೈಷ್ಣವಿ
‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ನಟನೆ ಆರಂಭಿಸಿದ ವೈಷ್ಣವಿ ಅವರು ‘ಸೀತಾರಾಮ’ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು.
ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ
ವೈಷ್ಣವಿ ಅವರು ಅನುಕೂಲ್ ಮಿಶ್ರಾ ಅವರ ಜೊತೆ 2025ರ ಏ.15ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ವೈಷ್ಣವಿ
ವೈಷ್ಣವಿ ಅವರು ಅನುಕೂಲ್ ಮಿಶ್ರಾ ಜತೆ 2025ರ ಜೂ.8ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.