ADVERTISEMENT

ಇಂದು ‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಗುವ ಹಣ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌
Published 27 ಸೆಪ್ಟೆಂಬರ್ 2025, 6:00 IST
Last Updated 27 ಸೆಪ್ಟೆಂಬರ್ 2025, 6:00 IST

ಚಿತ್ರ: colorskannadaofficial

ಚಿತ್ರ: colorskannadaofficial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಡುಗೆ ಶೋ ‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ ಶನಿವಾರ ಸಂಜೆ 6 ಗಂಟೆಯಿಂದ ರಾತ್ರಿ 10ರವರೆಗೆ ಪ್ರಸಾರವಾಗಲಿದೆ. ಈ ಶೋನಲ್ಲಿ ವಿಜೇತರಾಗುವ ಸ್ಪರ್ಧಿಗೆ ಬಹುಮಾನ ಎಷ್ಟು ಸಿಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.

ಚಿತ್ರ: colorskannadaofficial

ಗ್ರ್ಯಾಂಡ್ ಫಿನಾಲೆಯ ನಿಮಿತ್ತ 'ಕ್ವಾಟ್ಲೆ ಕಿಚನ್' ಶೋಗೆ ‘ಸು ಫ್ರಮ್ ಸೋ‘ ಸಿನಿಮಾದ ನಟರಾದ ರಾಜ್ ಬಿ ಶೆಟ್ಟಿ, ರವಿಯಣ್ಣ, ಜೆಪಿ ತೂಮಿನಾಡ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಾಣಸಿಗರಾಗಿ ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ಕಾವ್ಯ ಗೌಡ, ಶರ್ಮಿತ ಗೌಡ, ರಾಘವೇಂದ್ರ ಫೈನಲಿಸ್ಟ್ ಗಳಾಗಿದ್ದಾರೆ. ಈ 6 ಮಂದಿ ಫೈನಲಿಸ್ಟ್‌ಗಳಲ್ಲಿ ಎರಡು ಸುತ್ತಿನ ಮಹಾ ಪೈಪೋಟಿ ನಡೆಯಲಿದೆ. ಈ ಮೂಲಕ ಕೊನೆಯಲ್ಲಿ ಒಬ್ಬರನ್ನು ವಿಜೇತರಾಗಿ ಘೋಷಿಸಲಿದ್ದಾರೆ.

ಚಿತ್ರ: colorskannadaofficial

‘ಕ್ವಾಟ್ಲೆ ಕಿಚನ್’ ಗೆದ್ದವರಿಗೆ ಸಿಗುವ ಹಣ ಎಷ್ಟು?

ಇನ್ನು, ಕ್ವಾಟ್ಲೆ ಕಿಚನ್ ಗೆದ್ದ ವಿಜೇತರಿಗೆ ಟ್ರೋಫಿ ಜೊತೆಗೆ ₹5 ಲಕ್ಷ ನೀಡಲಾಗುತ್ತದೆ. ಸಂಚಿಕೆಯ ಕೊನೆಯಲ್ಲಿ ಕ್ವಾಟ್ಲೆ ಕಿಚನ್ ವಿನ್ನರ್‌ ಯಾರೆಂದು ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.