ADVERTISEMENT

‘ಮಹಾನಟಿ ಸೀಸನ್ 2’ ವಿಜೇತರಾದ ವಂಶಿ ರತ್ನಕುಮಾರ್: ಸಿಕ್ಕ ಬಹುಮಾನದ ಮೊತ್ತವೆಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 6:12 IST
Last Updated 10 ನವೆಂಬರ್ 2025, 6:12 IST
<div class="paragraphs"><p>ಮಹಾನಟಿ ಸೀಸನ್ 2 ವಿಜೇತೆ ವಂಶಿ</p></div>

ಮಹಾನಟಿ ಸೀಸನ್ 2 ವಿಜೇತೆ ವಂಶಿ

   

ಚಿತ್ರ:

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾನಟಿ ಸೀಸನ್ 2’ರ ವಿಜೇತರಾಗಿ ಮಂಗಳೂರಿನ ವಂಶಿ ಹೊರ ಹೊಮ್ಮಿದ್ದಾರೆ. ತಮ್ಮ ಅಭಿನಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದ್ದ ವಂಶಿ ಈಗ ಮಹಾನಟಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ADVERTISEMENT

ವಿಜೇತರಾದ ಬಳಿಕ ಮಾತನಾಡಿದ ವಂಶಿ ಅವರು, ‘ನನಗೆ ತುಂಬಾ ಖುಷಿ ಆಗುತ್ತಿದೆ. ಬಿ ಸರೋಜಾ ದೇವಿ ಅವರನ್ನು ನಾನು ನೋಡಿಲ್ಲ. ಆದರೆ, ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನ್ನ ಮೇಲಿದೆ. ನನ್ನ ಕುಟುಂಬದ ಆಸೆ ಈಗ ನನಸಾಗಿದೆ. ನಟಿ ಆಗಬೇಕು ಎಂಬ ಕನಸು ಕಂಡ ನನಗೆ ಇದು ಸಣ್ಣ ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.

ಟಾಪ್‌ 5 ಫೈನಲಿಸ್ಟ್‌ಗಳಾಗಿ ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಆಯ್ಕೆ ಆಗಿದ್ದರು. ಇವರಲ್ಲಿ ವಿಜೇತರಾಗಿ ವಂಶಿ, ಫಸ್ಟ್ ರನ್ನರ್ ಅಪ್‌ ಆಗಿ ವರ್ಷಾ ಡಿಗ್ರಜೆ ಹೊರ ಹೊಮ್ಮಿದ್ದಾರೆ. ಶ್ರೀಯ ಅಗಮ್ಯ ಎರಡನೇ ರನ್ನರ್‌ ಅಪ್‌ ಆಗಿದ್ದಾರೆ.

ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಮಹಾನಟಿ ಸೀಸನ್-2ರ ವಿನ್ನರ್ ಮಂಗಳೂರಿನ ವಂಶಿ ರತ್ನಾಕರ್ ಅವರಿಗೆ ₹15 ಲಕ್ಷ ಮೌಲ್ಯದ ಚಿನ್ನದ ಕಿರೀಟ ನೀಡಲಾಗಿದೆ. ಮೊದಲ ರನ್ನರ್ ಅಪ್‌ ಆಗಿರುವ ಬೆಳಗಾವಿಯ ವರ್ಷಾ ಡಿಗ್ರಜೆ ಅವರಿಗೆ ₹10 ಲಕ್ಷ ನಗದು ಬಹುಮಾನ ನೀಡಲಾಗಿದೆ. ಎರಡನೇ ರನ್ನರ್ ಅಪ್‌ ಆಗಿರುವ ಮೈಸೂರಿನ ಶ್ರೀಯ ಅಗಮ್ಯಗೆ ₹7 ಲಕ್ಷ ನಗದು ಬಹುಮಾನ ನೀಡಲಾಗಿದೆ.

‘ಮಹಾನಟಿ ಸೀಸನ್ 2’ನಲ್ಲಿ ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ತೀರ್ಪುಗಾರರ ​ಸ್ಥಾನದಲ್ಲಿದ್ದರು. ಇನ್ನು ಮಹಾನಟಿ ಸೀಸನ್ 2ರ ಗ್ರ್ಯಾಂಡ್ ಫಿನಾಲೆಯ ಸಂಚಿಕೆ ಶನಿವಾರ (ನವೆಂಬರ್ 8) ಹಾಗೂ ಭಾನುವಾರದಂದು (ನವೆಂಬರ್ 9) ಪ್ರಸಾರ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.