ADVERTISEMENT

ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 10:20 IST
Last Updated 24 ಜನವರಿ 2026, 10:20 IST
<div class="paragraphs"><p>ನಟಿ&nbsp;ರಾಧಾ ಭಗವತಿ</p></div>

ನಟಿ ರಾಧಾ ಭಗವತಿ

   

ಚಿತ್ರ: ಇನ್‌ಸ್ಟಾಗ್ರಾಂ

ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾರ್ಗವಿ LLB’ ಧಾರಾವಾಹಿಯಲ್ಲಿ ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಈ ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡಿದ್ದರು.

ADVERTISEMENT

ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಕ್ಕೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ. ಈ ಹಿಂದೆ ತಮಗೆ ಬಂದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟ ನಟಿ ರಾಧಾ ಭಗವತಿ ಅವರು ಸೋಜುಗಾದ ಸೂಜು ಮಲ್ಲಿಗೆ ಹಾಡನ್ನು ಹಾಡುತ್ತಾ, ‘ಗಾಯಕಿ ಆಗಬೇಕೆಂದು ಅಂದುಕೊಂಡವಳು ಚಿತ್ರರಂಗಕ್ಕೆ ಬಂದಿದ್ದು, ಆದರೆ ಕಲಾ ದೇವತೆ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾಳೆ. ಇವತ್ತು ನಿಮ್ಮೆಲ್ಲರ ಮುಂದೆ ಈ ಅವಾರ್ಡ್ ತೆಗೆದುಕೊಂಡಿದ್ದೀನಿ. ಮನೆಯಲ್ಲಿದ್ದ ಕಷ್ಟಗಳನ್ನು ನೋಡುವುದಕ್ಕೆ ಆಗದೇ, ಕೊನೆಯದಾಗಿ ಹೂವನ್ನು ಮಾರಲು ಹೋಗಿದ್ದೆ’ ಎಂದು ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ರಾಧಾ ಭಗವತಿ

ಮಲ್ಲಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ರಾಧಾ ಭಗವತಿ ಅವರು ಏಕಾಏಕಿ ಅಮೃತಧಾರೆ ಧಾರಾವಾಹಿಯಿಂದ ಹೊರ ಬಂದಿದ್ದರು. ಆ ಬೆನ್ನಲ್ಲೆ ಭಾರ್ಗವಿ LLB ಧಾರಾವಾಹಿ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಟಿ ರಾಧಾ ಭಗವತಿ ಅವರು ಅನುಬಂಧ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.