ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮುದ್ದು ಸೊಸೆ’ ‍ನಟ ನಿಶಿತ್‌ ರಾಜ್‌ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 11:42 IST
Last Updated 11 ಫೆಬ್ರುವರಿ 2026, 11:42 IST
<div class="paragraphs"><p>ನಟ ನಿಶಿತ್‌ ರಾಜ್‌ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.&nbsp;</p></div>

ನಟ ನಿಶಿತ್‌ ರಾಜ್‌ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

   

ಕೃಪೆ: ಇನ್‌ಸ್ಟಾಗ್ರಾಂ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಮುದ್ದು ಸೊಸೆ' ‍ಧಾರಾವಾಹಿಯಲ್ಲಿ ಕ್ವಾಟ್ಲೆ ಎಂಬ ಪಾತ್ರದ ಮೂಲಕ ಗಮನ ಸೆಳೆದಿರುವ ನಟ ನಿಶಿತ್‌ ರಾಜ್‌ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ADVERTISEMENT

ನಟ ನಿಶಿತ್‌ ರಾಜ್‌ ಶೆಟ್ಟಿ ಅವರು  ಅಭಿತಾ ಶೆಟ್ಟಿ ಎಂಬುವರ ಜೊತೆ ವಿವಾಹ ಆಗಿದ್ದಾರೆ.

ನಿಶಿತ್‌ ಅವರು  ವಿವಾಹದ ಫೋಟೊಗಳನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. 

‘ನಮ್ಮ ಮನೆಯ ಮೆಟ್ಟಿಲಿನ ಮೇಲೆ ನಡೆದ ಮೊದಲ ಮಾತುಕತೆಯಲ್ಲೇ ನಿರ್ಧಾರ ಮಾಡಿದ್ದೆವು. ಈ ದಿನದಿಂದ ಮುಂದೆ, ಒಂದಾಗಿ ಒಂದೇ ಮನಸ್ಸಾಗಿ ಜೀವನ ಸಾಗಿಸುತ್ತೇವೆ’ ಎಂದು ನಿಶಿತ್ ಬರೆದುಕೊಂಡಿದ್ದಾರೆ.

‘ಮುದ್ದು ಸೊಸೆ’ ಮಾತ್ರವಲ್ಲದೇ ಶ್ರೀಗೌರಿ ಎಂಬ ಧಾರಾವಾಹಿಯಲ್ಲಿ ನಿಶಿತ್ ನಟಿಸಿದ್ದರು.

ನಿಶಿತ್‌ ನಟಿಸಿರುವ 'ಮುದ್ದು ಸೊಸೆ' ‍ಧಾರಾವಾಹಿಯು 291ನೇ ಸಂಚಿಕೆಗೆ ಕಾಲಿಟ್ಟಿದೆ.  

ನಿಶಿತ್‌ ಅವರು ಧಾರಾವಾಹಿಯಲ್ಲಿ ನಟಿಸುವ ಮೊದಲು ರಂಗಭೂಮಿ ಕಲಾವಿದರಾಗಿದ್ದರು.

‘ಆರಂಭಗಾರ’ ಎಂಬ ಕಿರುಚಿತ್ರದಲ್ಲಿ ನಿಶಿತ್‌ ರಾಜ್‌ ಶೆಟ್ಟಿ ಅವರು ನಟಿಸಿದ್ದರು.

‘ಸಿದ್ಲಿಂಗು 2’ ಚಿತ್ರದ ಹಾಡಿನಲ್ಲೂ ನಟ ನಿಶಿತ್‌ ಬಣ್ಣ ಹಚ್ಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.