
ನಟಿ ಕೃಷ್ಣಪ್ರಿಯಾ ಭಟ್
ಚಿತ್ರ: ಇನ್‌ಸ್ಟಾಗ್ರಾಂ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಂದಗೋಕುಲ’ ಧಾರಾವಾಹಿ ನಟಿ ಕೃಷ್ಣಪ್ರಿಯಾ ಭಟ್ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂದಗೋಕುಲದಲ್ಲಿ ಮಾಧವ, ಕೇಶವ, ವಲ್ಲಭನ ಮುದ್ದಿನ ತಂಗಿ ರಕ್ಷಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕೃಷ್ಣಪ್ರಿಯಾ, ನಿಜ ಜೀವನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೃಷ್ಣಪ್ರಿಯಾ ಭಟ್ ಮತ್ತು ಅಮೋಘ್
ಧಾರಾವಾಹಿಯಲ್ಲಿ ನಂದನ ಕೊನೆ ಮಗಳು ಆಗಿರುವ ರಕ್ಷಾ ಅವರ ನಿಜವಾದ ಹೆಸರು ಕೃಷ್ಣಪ್ರಿಯಾ. ಕಳೆದ ವರ್ಷ ಆಗಸ್ಟ್ 24ರಂದು ಅಮೋಘ್ ಕುಂಟಿನಿ ಎಂಬುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಕುಟುಂಬದವರೇ ನಿಶ್ಚಯಿಸಿದ ಹುಡುಗನ ಜೊತೆಗೆ ಕೃಷ್ಣಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೃಷ್ಣಪ್ರಿಯಾ ಭಟ್ ಮತ್ತು ಅಮೋಘ್
ಇಂದು (ಫೆ.6) ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಕೃಷ್ಣಪ್ರಿಯಾ ಮತ್ತು ಅಮೋಘ್ ಅವರ ಮದುವೆ ಸಮಾರಂಭ ಜರುಗಿದೆ. ಫೆಬ್ರುವರಿ 7ರಂದು ಧರ್ಮಸ್ಥಳ ಸಮೀಪವಿರುವ ಕನ್ಯಾಡಿ ಶ್ರೀರಾಮ ಮಂದಿರದಲ್ಲಿ ಆರತಕ್ಷತೆ ನಡೆಯಲಿದೆ. ಮದುವೆಯಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಕೃಷ್ಣಪ್ರಿಯಾ ಭಟ್ ಮತ್ತು ಅಮೋಘ್
ಕೃಷ್ಣಪ್ರಿಯಾ ಭಟ್ ಅವರನ್ನು ಮದುವೆಯಾದ ಅಮೋಘ್ ಅವರು ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಟಾಟಾ EKXSI ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.