
ರಕ್ಷಿತಾ ಶೆಟ್ಟಿ, ಕಿಚ್ಚ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12ರ ರನ್ನರ್ ಅಪ್ ಆಗಿದ್ದ ರಕ್ಷಿತಾ ಶೆಟ್ಟಿ 3 ತಿಂಗಳ ಪಯಣ ಹೇಗಿತ್ತು ಎಂಬುವುದನ್ನು ವಿವರಿಸಿದ್ದಾರೆ. ಅದರಲ್ಲೂ ಬಿಗ್‌ಬಾಸ್ ಮನೆಯ ಕೊನೆಯ ದಿನದ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮ್ಮ ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬಿಗ್‌ಬಾಸ್ ಮನೆಯ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ರಕ್ಷಿತಾ ಶೆಟ್ಟಿ ಪೋಸ್ಟ್‌ನಲ್ಲಿ ಏನಿದೆ?
‘ನನ್ನ ಜೀವನದಲ್ಲಿ ಎಂದಿಗೂ ಮರೆಯಾಗದ ದಿನ ಎಂದರೆ ಬಿಗ್‌ಬಾಸ್ ಮನೆಯಲ್ಲಿದ್ದ ಕೊನೆಯ ದಿನ. ಮೂರು ತಿಂಗಳುಗಳ ಕಾಲ ಎಲ್ಲವೂ ಇತ್ತು. ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಬೆಳವಣಿಗೆ. ಸ್ಪರ್ಧೆಯಾಗಿ ಆರಂಭವಾದ ಈ ಮನೆ, ಸಮಯದೊಂದಿಗೆ ನಿಜವಾದ ಮನೆಯಾಗಿಬಿಟ್ಟಿತು. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು. ಇದು ಕೇವಲ ಒಂದು ಪ್ರಯಾಣವಲ್ಲ, ನಾನು ಇಲ್ಲಿ ಅನೇಕ ಸಂಬಂಧಗಳನ್ನು ಕಟ್ಟಿಕೊಂಡೆ’ ಎಂದಿದ್ದಾರೆ.
‘ಬಹಳಷ್ಟು, ಅಮೂಲ್ಯವಾದ ಬಾಂಧವ್ಯಗಳು ಇವು ಸದಾ ನನ್ನ ಹೃದಯದಲ್ಲಿರುತ್ತವೆ. ಸುದೀಪ್ ಸರ್ ಮನೆಗೆ ಪ್ರವೇಶಿಸಿದ ಕ್ಷಣ ತುಂಬಾ ಸಂತೋಷ ತಂದಿತು. ಆದರೆ ಮನೆ ಬಿಟ್ಟು ಹೊರಡುವ ಸಮಯ ನನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು. ಈ ಎಲ್ಲಾ ತಿಂಗಳುಗಳ ನಂತರ ಈ ಮನೆಯನ್ನು ಬಿಟ್ಟು ಹೋಗುವುದು ಸುಲಭವಲ್ಲ. ಆ ನೋವು ಮನಸ್ಸಿನಲ್ಲಿ ಉಳಿದಿದೆ. ಕೆಲವು ಸ್ಥಳಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅವು ನಮ್ಮೊಳಗೇ ಉಳಿದುಬಿಡುತ್ತವೆ. ನಿಮೆಲ್ಲರ ಪ್ರೀತಿ, ಬೆಂಬಲ, ಪ್ರಾರ್ಥನೆಗಳು ಮತ್ತು ಮತಗಳು ನನಗೆ ಶಕ್ತಿ ನೀಡಿದವು. ನಾನು ಅಷ್ಟು ದೂರ ಬಿಗ್‌ಬಾಸ್ ಮನೆಯಲ್ಲಿ ಉಳಿಯಲು ನೀವೇ ಕಾರಣ. ನಿಮಗೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.