ಪುಟಾಣಿಗಳ ಮಧುರ ಧ್ವನಿ ಆಲಿಸಲು ಝೀ ಕನ್ನಡ ವಾಹಿನಿಯು ‘ಸರಿಗಮಪ ಲಿಟಲ್ ಚಾಂಪ್ಸ್’ ಆರಂಭಿಸುತ್ತಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಆಡಿಷನ್ ನಡೆಸುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಆಡಿಷನ್ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ಇಲ್ಲಿದೆ.
ಆಡಿಷನ್ ವಿವರ ಹೀಗಿದೆ..
ಫೆ. 14 ರಂದು ಶನಿವಾರ ಕೊಪ್ಪಳ, ಶಿವಮೊಗ್ಗ, ತುಮಕೂರು.
ಫೆ. 15ರಂದು ಭಾನುವಾರ ಬಳ್ಳಾರಿ, ಉಡುಪಿ, ಬೆಂಗಳೂರು.
ಫೆ. 16ರಂದು ಸೋಮವಾರ ರಾಯಚೂರು, ಮಂಗಳೂರು.
ಫೆ. 17ರಂದು ಮಂಗಳವಾರ ಯಾದಗಿರಿ, ಮಡಿಕೇರಿ, ಚಿತ್ರದುರ್ಗ.
ಫೆ. 18ರಂದು ಬುಧವಾರ ಚಿಕ್ಕಮಗಳೂರು, ದಾವಣಗೆರೆಯಲ್ಲಿ ನಡೆಯಲಿದೆ.
ಫೆ. 19ರಂದು ಗುರುವಾರ ಬೀದರ್, ಹಾವೇರಿ.
ಫೆ. 20ರಂದು ಶುಕ್ರವಾರ ಕಲಬುರ್ಗಿ, ಮಂಡ್ಯ, ಶಿರಸಿ.
ಫೆ. 21ರಂದು ಶನಿವಾರ ವಿಜಯಪುರ, ಹಾಸನ, ಬೆಳಗಾವಿಯಲ್ಲಿ ನಡೆಯುತ್ತದೆ.
ಫೆ. 22ರಂದು ಭಾನುವಾರ ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ.
ಫೆ.23 ರಂದು ಸೋಮವಾರ ಗದಗ.
ಫೆ. 24ರಂದು ಮಂಗಳವಾರ ವಿಜಯನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ.
ಫೆ.25ರಂದು ಬುಧವಾರ ರಾಮನಗರ ಹಾಗೂ ಕೋಲಾರದಲ್ಲಿ ಆಡಿಷನ್ ನಡೆಯಲಿದೆ.
ಬೆಳಗ್ಗೆ 9ಗಂಟೆಗೆ ಆಡಿಷನ್ ಆರಂಭವಾಗಲಿದೆ
‘ಸರಿಗಮಪ ಲಿಟಲ್ ಚಾಂಪ್’ ಆಡಿಷನ್ ನಿಯಮ ಹೀಗಿದೆ.
ವಯಸ್ಸಿನ ಮಿತಿ: 3ರಿಂದ 15 ವರ್ಷ
3 ವಿಭಿನ್ನ ಶೈಲಿಯ ಹಾಡುಗಳನ್ನು ಕರೋಕೆ ಬಳಸದೆ ಹಾಡುವಂತಿರಬೇಕು.
ಆಡಿಷನ್‌ನಲ್ಲಿ ಭಾಗವಹಿಸುವಾಗ ಪಾಸ್‌ಪೋರ್ಟ್ ಫೋಟೋ ಹಾಗೂ ವಿಳ್ಳಾಸ ಸಾಕ್ಷ್ಯ ಜೆರಾಕ್ಸ್ ಜೊತೆಗೆ ಬರಬೇಕೆಂದು ಝೀ ಕನ್ನಡ ವಾಹಿನಿ ತಂಡ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.