
ನಟಿ ಗೀತಾ ಭಾರತಿ ಭಟ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ನಟಿ ಗೀತಾ ಭಾರತಿ ಭಟ್ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿದ್ದ ಗೀತಾ ಭಾರತಿ ಭಟ್ ಇದೀಗ ಹಸೆಮಣೆ ಏರಿದ್ದಾರೆ.
ನಟಿ ಗೀತಾ ಭಾರತಿ ಭಟ್ ದಂಪತಿ
ನಟಿ ಗೀತಾ ಭಾರತಿ ಭಟ್ ಅವರು ಗುಂಡಮ್ಮ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದರು. ಅಷ್ಟೇ ಅಲ್ಲ ಬಿಗ್‌ಬಾಸ್ ಸೀಸನ್ 8ರಲ್ಲಿಯೂ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ ಮೂರನೇ ವಾರಕ್ಕೆ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದರು. ಆ ಬಳಿಕ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ನಟಿಸಿದ್ದರು.
ನಟಿ ಗೀತಾ ಭಾರತಿ ಭಟ್ ದಂಪತಿ
ಗಾಯಕಿಯೂ ಆಗಿರುವ ಗೀತಾ ಅವರು ಪ್ರಸ್ತುತವಾಗಿ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನವ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ನಟಿ ಗೀತಾ ಭಾರತಿ ಭಟ್ ದಂಪತಿ
ನಟಿ ತಾವು ಮದುವೆಯಾಗಿರುವ ಹುಡುಗ ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ಗೀತಾ ಭಾರತಿ ಭಟ್ ನೀಡಿಲ್ಲ. ತಮ್ಮ ಪತಿ ಯಾರು ಎಂಬುದರ ಮಾಹಿತಿಯನ್ನು ನಟಿ ಇನ್ನಷ್ಟೇ ನೀಡಬೇಕಿದೆ.