ನಟ ಶಿವರಾಜ್‌ಕುಮಾರ್, ನಿರೂಪಕಿ ಅನುಶ್ರೀ
ಚಿತ್ರ: ಜೀ ಕನ್ನಡ ಇನ್‌ಸ್ಟಾಗ್ರಾಮ್
ಜೀ ಕನ್ನಡ ವಾಹಿನಿಯಲ್ಲಿ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್- 2025’ ಕಾರ್ಯಕ್ರಮ ಇದೇ ತಿಂಗಳ (ಅಕ್ಟೋಬರ್) 17, 18 ಮತ್ತು 19ರಂದು ಸಂಜೆ 6:30ಕ್ಕೆ ಪ್ರಸಾರವಾಗಲಿದೆ.
ಗೀತಾ ಶಿವರಾಜ್‌ಕುಮಾರ್, ನಟ ಶಿವರಾಜ್‌ಕುಮಾರ್, ರೋಷನ್ ಹಾಗೂ ನಿರೂಪಕಿ ಅನುಶ್ರೀ
ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಒಂದೊಂದೆ ಪ್ರೊಮೋಗಳನ್ನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಬೃಹತ್ ವೇದಿಕೆ ಮೇಲೆ ನಿರೂಪಕಿ ಅನುಶ್ರೀಗಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಡಾ. ರಾಜಕುಮಾರ್ ಅಭಿನಯದ ಗುರಿ ಸಿನಿಮಾದ ಗೀತೆಯನ್ನು ಹಾಡಿದ್ದಾರೆ.
ಹೌದು, ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರನ್ನು ಮದುವೆಯಾಗಿದ್ದಾರೆ. ಈಗ ನವ ದಂಪತಿಗಳಾಗಿರುವ ಅನುಶ್ರೀ ಹಾಗೂ ರೋಷನ್ ದಂಪತಿಗೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಶಿವಣ್ಣ ಅವರು ಹರಸಿ ಹಾರೈಸಿದ್ದಾರೆ.
ಅನುಶ್ರೀ ಅವರು ಸಾಕಷ್ಟು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಜೀ ಕುಟುಂಬ ಅವಾರ್ಡ್ಸ್ ವೇದಿಕೆ ಮೇಲೆ ಅವರಿಗೆ ಶುಭ ಹಾರೈಸಲಾಗಿದೆ. ಜೊತೆಗೆ ಶಿವಣ್ಣ ಅವರು ಅನುಶ್ರೀಗಾಗಿ ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು ಎಂದು ಹಾಡಿ ಅನುಶ್ರೀಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತಿ ರೋಷನ್‌ಗೆ ಹೇಳಿದ್ದಾರೆ.