
ನಟಿ, ನಿರ್ಮಾಪಕಿ ಶ್ರುತಿ ನಾಯ್ಡು
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡ ಕಿರುತೆರೆಯ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶ್ರುತಿ ನಾಯ್ಡು ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ನಿನ್ನೆ (ಡಿಸೆಂಬರ್ 5) ಶ್ರುತಿ ನಾಯ್ಡು ಅವರು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.
‘ಯಾರೇ ನೀ ಮೋಹಿನಿ’, ‘ಮಹಾನದಿ’, ‘ಮಹಾದೇವಿ’, ‘ಪುನರ್‌ವಿವಾಹ’, ‘ದೇವಿ’, ‘ಚಿ ಸೌ ಸಾವಿತ್ರಿ’ ಮುಂತಾದ ಧಾರಾವಾಹಿಗಳನ್ನು ಶ್ರುತಿ ನಾಯ್ಡು ನಿರ್ಮಿಸಿದ್ದಾರೆ.
ಶ್ರುತಿ ನಾಯ್ಡು ಅವರ ತಮ್ಮ ಹುಟ್ಟು ಹಬ್ಬದ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೊಗಳಲ್ಲಿ ಶ್ರುತಿ ನಾಯ್ಡು ಕೆಂಪು ಬಣ್ಣದ ಉದ್ದನೇಯ ಗೌನ್ ಅನ್ನು ಧರಿಸಿಕೊಂಡು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಶ್ರುತಿ ನಾಯ್ಡು ಅವರು ‘ಚಿ ಸೌ ಸಾವಿತ್ರಿ’, ‘ಪುನರ್‌ವಿವಾಹ’, ‘ಶ್ರೀರಸ್ತು ಶುಭಮಸ್ತು’, ‘ಬ್ರಹ್ಮಗಂಟು’ ಮುಂತಾದ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ.
ಸದ್ಯ, ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯ ನಿರ್ಮಾಪಕಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.