
ಸಂಜನಾ ಗಲ್ರಾನಿ, ತನುಜಾ ಪುಟ್ಟಸ್ವಾಮಿ
ಚಿತ್ರ: ಇನ್‌ಸ್ಟಾಗ್ರಾಂ
ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 9 ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. 98 ದಿನಗಳನ್ನ ಪೂರೈಸಿರುವ ಈ ಬಾರಿಯ ಬಿಗ್‌ಬಾಸ್ ಫಿನಾಲೆ ವಾರದಲ್ಲಿದೆ. 5 ಮಂದಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದಾರೆ.
ವಿಶೇಷ ಏನೆಂದರೆ ಈ ಬಾರಿಯ ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ಇಬ್ಬರು ಕನ್ನಡತಿಯರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸೀಸನ್ 9ರ ವಿಜೇತರು ಯಾರಾಗಲಿದ್ದಾರೆ ಎಂಬುವುದು ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ.
ಸದ್ಯ ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ಟಾಪ್ 5 ಸದಸ್ಯರಾಗಿ ತನುಜಾ, ಕಲ್ಯಾಣ್, ಎಮ್ಯಾನುಯೆಲ್, ಸಂಜನಾ ಗಲ್ರಾನಿ ಮತ್ತು ಡೆಮನ್ ಪವನ್ ಆಯ್ಕೆಯಾಗಿದ್ದಾರೆ. ಇವರಲ್ಲಿ ಈ ಬಾರಿಯ ಬಿಗ್‌ಬಾಸ್ ವಿಜೇತರು ಯಾರೆಂದು ವಾರದ ಕೊನೆಯಲ್ಲಿ ನಟ, ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರು ಘೋಷಿಸಲಿದ್ದಾರೆ.
ಇನ್ನು, ಬಿಗ್‌ಬಾಸ್ ಸೀಸನ್ 9ರ ಫಿನಾಲೆಯಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಹಾಗೂ ತನುಜಾ ಪುಟ್ಟಸ್ವಾಮಿ ಇಬ್ಬರು ಫೈನಲ್‌ಗೆ ತಲುಪಿದ್ದಾರೆ. ಕಳೆದ ಭಾನುವಾರ ಡಬಲ್ ಎಲಿಮಿನೇಷನ್ ಮೂಲಕ ಇಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಈ ಪೈಕಿ ಐವರು ಫಿನಾಲೆಗೆ ತಲುಪಿದ್ದಾರೆ. ಇನ್ನು, ಈ ಇಬ್ಬರು ಕನ್ನಡತಿಯರಲ್ಲಿ ಒಬ್ಬರಾದರೂ ಬಿಗ್‌ಬಾಸ್ ವಿಜೇತರಾಗಲಿ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.