
ಪವನ್ ಕಲ್ಯಾಣ್ ಪಡಲ, ಅಕ್ಕಿನೇನಿ ನಾಗಾರ್ಜುನ, ತನುಜಾ ಪುಟ್ಟಸ್ವಾಮಿ
ಚಿತ್ರ: ಜಿಯೋ ಹಾಟ್ ಸ್ಟಾರ್
ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 9 ಮುಕ್ತಾಯಗೊಂಡಿದೆ. 106 ದಿನಗಳನ್ನು ಪೂರೈಸಿರುವ ತೆಲುಗು ಬಿಗ್‌ಬಾಸ್ ಸೀಸನ್ 9ರ ವಿಜೇತರಾಗಿ ಪವನ್ ಕಲ್ಯಾಣ್ ಪಡಲ ಹೊರ ಹೊಮ್ಮಿದ್ದಾರೆ. ಕನ್ನಡತಿ ತನುಜಾ ಪುಟ್ಟಸ್ವಾಮಿ ರನ್ನರ್ ಅಪ್ ಆಗಿದ್ದಾರೆ.
ಈ ಬಾರಿಯ ತೆಲುಗು ಬಿಗ್‌ಬಾಸ್ ಸೀಸನ್ 9ಕ್ಕೆ ಕನ್ನಡತಿಯರಾದ ನಟಿ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಎಂಟ್ರಿ ಕೊಟ್ಟಿದ್ದರು. ಬಿಗ್‌ಬಾಸ್ ಫಿನಾಲೆಯವರೆಗೂ ತಲುಪಿದ ಇಬ್ಬರಿಗೂ ಕೊನೇ ಕ್ಷಣದಲ್ಲಿ ಅದೃಷ್ಟ ಕೈಕೊಟ್ಟಿದೆ. ಕೊನೆಯ ಹಂತದಲ್ಲಿ ತನುಜಾ ಪುಟ್ಟಸ್ವಾಮಿ ಅವರು ರನ್ನರ್ ಅಪ್ ಆಗಿದ್ದಾರೆ.
ಇನ್ನು, ಒಟ್ಟು ಐದು ಜನ ಸ್ಪರ್ಧಿಗಳು ಬಿಗ್‌ಬಾಸ್ ಫಿನಾಲೆಗೆ ಬಂದಿದ್ದರು. ಸಂಜನಾ ಗಲ್ರಾನಿ, ಕಲ್ಯಾಣ್, ಇಮಾನ್ಯುಯೆಲ್, ತನುಜಾ ಮತ್ತು ಪವನ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಐವರಲ್ಲಿ ಬಿಗ್‌ಬಾಸ್ ಸೀಸನ್ 9ರ ವಿಜೇತರು ಯಾರಾಗಲಿದ್ದಾರೆ ಎಂಬುವುದು ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿತ್ತು. ಭಾನುವಾರದ ಸಂಚಿಕೆಯಲ್ಲಿ (ಡಿಸೆಂಬರ್ 21) ವಿನ್ನರ್ ಹೆಸರನ್ನು ನಟ, ನಿರೂಪಕ ಅಕ್ಕಿನೇನಿ ನಾಗಾರ್ಜುನ್ ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಪಡಲ ಅವರು ₹40 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಮಾರುತಿ ಸುಜುಕಿ ವಿಕ್ಟೋರಿಸ್ ಕಾರನ್ನು ಗೆದ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.