ADVERTISEMENT

ರೆಸಿಪಿ: ಮನೆಯಲ್ಲೇ ತಯಾರಿಸಿ ಬೇಕರಿ ಮಾದರಿಯ ಕ್ಯಾರೆಟ್ ಬರ್ಫಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 12:56 IST
Last Updated 27 ಡಿಸೆಂಬರ್ 2025, 12:56 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಸಿಹಿ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಕಡಲೆ ಬೀಜದಿಂದ ತಯಾರಿಸಿದ ಬರ್ಫಿಯನ್ನು ಎಲ್ಲರೂ ತಿಂದಿರುತ್ತೇವೆ. ಆದರೆ, ಕ್ಯಾರೆಟ್‌ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:

ADVERTISEMENT
  • ಕ್ಯಾರೆಟ್‌

  • ಹಾಲು

  • ಸಕ್ಕರೆ

  • ಏಲಕ್ಕಿ

  • ತುಪ್ಪ

  • ಒಣ ದ್ರಾಕ್ಷಿ

ಕ್ಯಾರೆಟ್‌ ಬರ್ಫಿ ತಯಾರಿಸುವ ವಿಧಾನ

ಮೊದಲಿಗೆ ಕ್ಯಾರೆಟ್‌ ಅನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಕ್ಯಾರೆಟ್‌ ಅನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು.

ಒಂದು ಬಾಣಲೆ ತೆಗೆದುಕೊಂಡು ತುಪ್ಪ ಸೇರಿಸಿ ಸ್ಟವ್‌ ಮೇಲಿಟ್ಟು ಬಿಸಿ ಮಾಡಿ, ನಂತರ ತುರಿದಿಟ್ಟುಕೊಂಡ ಕ್ಯಾರೆಟ್‌ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಕ್ಯಾರೆಟ್‌ ತುರಿ ಬೆಂದ ನಂತರ ಅದಕ್ಕೆ ಹಾಲು ಹಾಗೂ ಪುಡಿ ಮಾಡಿಟ್ಟುಕೊಂಡ ಏಲಕ್ಕಿಯನ್ನು ಸೇರಿಸಿ.

ಬಳಿಕ ಸ್ಟವ್‌ನ ಉರಿ ಕಡಿಮೆ ಮಾಡಿ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ಹದವಾಗಿ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ.

ಒಂದು ತಟ್ಟೆ ತೆಗೆದುಕೊಂಡು ಅದರ ತಳಭಾಗಕ್ಕೆ ತುಪ್ಪವನ್ನು ಸವರಿಕೊಳ್ಳಿ. ಬಿಸಿಬಿಸಿಯಾದ ಕ್ಯಾರೆಟ್‌ ತುರಿಯನ್ನು ತಟ್ಟೆಯ ತುಂಬಾ ಸಮವಾಗಿ ಹರಡಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿಕೊಂಡರೆ ಸವಿಯಲು ಸಿದ್ದ ಕ್ಯಾರೆಟ್ ಬರ್ಫಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.