
ಮಾಂಸಹಾರಿಗಳ ನೆಚ್ಚಿನ ಖಾದ್ಯ ಅಂದರೆ ಅದು ಚಿಕನ್ ಬಿರಿಯಾನಿ. ಆದರೆ, ಅನೇಕರಿಗೆ ಇದನ್ನು ಮಾಡಲು ಬರುವುದಿಲ್ಲ ಎನ್ನುವವರಿಗಾಗಿ, ಬಹುಬೇಗನೆ, ಸುಲಭವಾಗಿ ಮನೆಯಲ್ಲೆ ಚಿಕನ್ ಬಿರಿಯಾನಿ ಮಾಡುವುದು ಹೇಗೆ ? ಎಂಬುದರ ಮಾಹಿತಿ ಇಲ್ಲಿದೆ.
ಚಿಕನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು
1 ಲೋಟ ಅಕ್ಕಿ
ಚಿಕನ್ – ಅರ್ಧ ಕೆಜಿ
ಅಡುಗೆ ಎಣ್ಣೆ – 5 ರಿಂದ 6 ಚಮಚ
ಪಾಲವ್ ಎಲೆ – 1 ರಿಂದ 2
ಚಕ್ಕೆ,ಲವಂಗ, ಮಾರಾಟ್ ಮೊಗ್ಗು,ಕಲ್ಲಿನ ಹೂ- ಅಗತ್ಯಕ್ಕೆ ತಕ್ಕಷ್ಟು
ತುಪ್ಪ–2 ಚಮಚ
ಗರಂ ಮಸಾಲ –2 ಚಮಚ
ಖಾರದ ಪುಡಿ– 2 ರಿಂದ 3 ಚಮಚ
ಅರಿಶಿನ– ಅರ್ಧ ಚಮಚ
ಧನಿಯಾ ಪುಡಿ– 2 ಚಮಚ
ಟೊಮೊಟೊ–2ರಿಂದ 3
ಈರುಳ್ಳಿ– 2
ಮೊಸರು ಅರ್ಧ ಕಪ್
ನಿಂಬೆ ಹಣ್ಣು– ಅರ್ಧ
ಶುಂಠಿ ಬೆಳ್ಳಿಳ್ಳಿ ಪೇಸ್ಟ್– 2 ರಿಂದ 3 ಚಮಚ
ಹಸಿರು ಮೆಣಸಿನ ಕಾಯಿ –5 ರಿಂದ 6
ಕೊತ್ತಂಬರಿ ಸೊಪ್ಪು – 1 ಕಪ್
ಪುದೀನಾ ಸೊಪ್ಪು 1 ಕಪ್
ಹೆಚ್ಚಿಕೊಂಡ ಈರುಳ್ಳಿ –2
ಟೊಮೊಟೊ– 2 ರಿಂದ 3
ಮಾಡುವ ವಿಧಾನ ಕುಕ್ಕರ್ ಅಥವಾ ಪಾತ್ರೆಗೆ ಅಡುಗೆ ಎಣ್ಣೆ, ತುಪ್ಪ ಹಾಕಿ 1ನಿಮಿಷ ಕಾಯಲು ಇಡಿ. ಅದಕ್ಕೆ, ಚಕ್ಕೆ, ಲವಂಗ, ಕಲ್ಲಿನ ಹೂ (ಪರ್ಮೊಟ್ರೆಮಾ ಪರ್ಲಾಟಮ್), ಪಲಾವ್ ಹಾಗೂ ಕತ್ತರಿಸಿಕೊಂಡ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ.
ಬಳಿಕ ಅದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ಹೆಚ್ಚಿಕೊಂಡ ಟೊಮೆಟೊ, ಉಪ್ಪು ಸೇರಿಸಿ,ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ತೊಳೆದುಕೊಂಡ ಚಿಕನ್, ಕೊತ್ತಂಬರಿ, ಪುದೀನಾ ಸೊಪ್ಪು, ಮೊಸರು ಸೇರಿಸಿ ಮಿಶ್ರಣ ಮಾಡಿ. ಧನಿಯಾ ಪುಡಿ, ಗರಂ ಮಸಾಲ ಸೇರಿಸಿ ಮಿಶ್ರಣ 15 ನಿಮಿಷ ಬೇಯಿಸಿಕೊಳ್ಳಿ.
ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 5 ನಿಮಿಷ ಕುದಿಯಲು ಬಿಡಿ. ನಂತರ ಅದಕ್ಕೆ 1 ಲೋಟ (ಪಾವು) ಅಕ್ಕಿ ತೊಳೆದು ಹಾಕಿಕೊಳ್ಳಿ. ನಂತರ ಅದಕ್ಕೆ 1 ಚಮಚ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿಕೊಳ್ಳಿ, ನಂತರ ನಿಧಾನವಾಗಿ ಬೇಯಲು ಬಿಡಿ.
ಸವಿಯಲು ಸಿದ್ದ ಬಿರಿಯಾನಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.