
ರೋಸ್ ಕುಕ್ಕೀಸ್
ಎಐ ಚಿತ್ರ
ಕ್ರಿಸ್‌ಮಸ್ ಆಚರಣೆಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಲು ಮನೆಯಲ್ಲೇ ವಿಶೇಷವಾಗಿ ಸಿಹಿ ತಿನಿಸುಗಳು, ಸ್ನ್ಯಾಕ್ಸ್, ಕುರುಕು ತಿಂಡಿ, ವೈನ್, ಕೇಕ್ ಹೀಗೆ ಸಾಕಷ್ಟು ರೀತಿಯ ರೆಸಿಪಿಗಳನ್ನು ತಯಾರಿಸುತ್ತಾರೆ.
ಈ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಗರಿಗರಿಯಾದ ರೋಸ್ ಕುಕ್ಕೀಸ್ ಅನ್ನು ತಯಾರಿಸಲಾಗುತ್ತದೆ. ಇದು ನೋಡಲು ಹೂವಿನ ಆಕಾರದಲ್ಲಿರುತ್ತದೆ. ಇದು ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಈ ರೋಸ್ ಕುಕ್ಕೀಸ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುತ್ತದೆ ಸಿಹಿ ತಿಂಡಿಯಾಗಿದೆ. ರೋಸ್ ಕುಕ್ಕೀಸ್ ಮಾಡುವ ವಿಧಾನ ನೋಡೋಣ.
ರೋಸ್ ಕುಕ್ಕೀಸ್ ಮಾಡಲು ಬೇಕಾಗುವ ಸಾಮಾಗ್ರಿಗಳು:
ಎಣ್ಣೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಸಕ್ಕರೆ, ತೆಂಗಿನ ಹಾಲು, ಮೊಟ್ಟೆ, ಏಲಕ್ಕಿ ಪುಡಿ, ಎಳ್ಳು, ಉಪ್ಪು ಹಾಗೂ ಅಚ್ಚು ಬ್ಯಾಟರ್.
ಮಾಡುವ ವಿಧಾನ:
ಒಂದು ಪಾತ್ರೆಗೆ ಮೊಟ್ಟೆ ಹಾಕಿ ಅದನ್ನು ಮಿಶ್ರಣ ಮಾಡಿ. ಬಳಿಕ ಅದಕ್ಕೆ ತೆಂಗಿನ ಹಾಲು, ರೋಸ್ ವಾಟರ್, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಏಲಕ್ಕಿ ಪುಡಿ ಹಾಗೂ ಕಪ್ಪು ಎಳ್ಳು ಹಾಕಿ ಮತ್ತೆ ಮಿಶ್ರಣ ಮಾಡಿ. ನಂತರ ಒಂದು ಪ್ಲಾಸಿಕ್ ಕವರ್‌ನಿಂದ ಅದನ್ನು ಮುಚ್ಚಿ 1 ಗಂಟೆ ನೆನಸಿಡಿ.
ನಂತರ ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬೆಚ್ಚಗಾದ ಬಳಿಕ ಮಿಶ್ರಣ ಮಾಡಿಕೊಂಡ ರೆಸಿಪಿಯಲ್ಲಿ ಅಚ್ಚು ಬ್ಯಾಟರ್ ಅನ್ನು ಅದ್ದಿ ನಿಧಾನವಾಗಿ ಎಣ್ಣೆಗೆ ಬಿಡುತ್ತಾ ಹೋಗಿ. ಒಂದಾದ ನಂತರ ಒಂದರಂತೆ ಎಣ್ಣೆಯಲ್ಲಿ ಹಾಕಿ. ನಂತರ ಒಂದು ಬುಟ್ಟಿಯಲ್ಲಿ ರೋಸ್ ಕುಕ್ಕಿಸ್ ಹಾಕಿ. ಈಗ ಗರಿಗರಿಯಾದ ರೋಸ್ ಕುಕ್ಕಿಸ್ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.