ADVERTISEMENT

ರೆಸಿಪಿ| ಹೋಟೆಲ್ ಶೈಲಿಯಲ್ಲಿ ಕರಿಬೇವು ಕೋಳಿ ಕಬಾಬ್ ಮಾಡೋದು ಹೇಗೆ? ಇಲ್ಲಿದೆ ವಿಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2025, 12:27 IST
Last Updated 25 ಅಕ್ಟೋಬರ್ 2025, 12:27 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಭಾನುವಾರ ಬಂತೆಂದರೆ ಮಾಂಸ ಸೇವಿಸುವವರು ಏನಾದರು ವಿಶೇಷ ಖಾದ್ಯ ಮಾಡಲು ಯೋಚಿಸುತ್ತಾರೆ. ಪ್ರತಿ ವಾರ ಒಂದೇ ಬಗೆಯ ಮಾಂಸದ ಅಡುಗೆ ತಿಂದು ತಿಂದು ಬೇಸತ್ತಿದ್ದರೆ, ನಾವಿಂದು ನಿಮಗಾಗಿ ಹೋಟೆಲ್ ಶೈಲಿಯಲ್ಲಿ ಕರಿಬೇವು ಕೋಳಿ ಕಬಾಬ್ ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ ನೋಡಿ.

ಕರಿಬೇವು ಕೋಳಿ ಕಬಾಬ್ ಮಾಡಲು ಬೇಕಾಗುವ ಸಾಮಾಗ್ರಿಗಳು

ADVERTISEMENT
  • ಚಿಕನ್

  • ಕರಿಬೇವು

  • ಅಡುಗೆ ಎಣ್ಣೆ

  • ಹಸಿಮೆಣಸಿನಕಾಯಿ

  • ಶುಂಠಿ, ಬೆಳ್ಳುಳ್ಳಿ ಪೇಸ್ಟ್

  • ಕಾರ್ನ್ ಫ್ಲೋರ್

  • ಕಡಲೆ ಹಿಟ್ಟು

  • ಉಪ್ಪು

  • ಮೊಟ್ಟೆ

  • ನಿಂಬೆಹಣ್ಣಿನ ರಸ

  • ಗರಂ ಮಸಾಲ ಪೌಡರ್

  • ಬ್ಯಾಡಗಿ ಮೆಣಸಿನಕಾಯಿ ಪೌಡರ್

  • ಗುಂಟೂರು ಮಸಾಲಾ

ಮಾಡುವ ವಿಧಾನ

ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಪಾತ್ರೆಯಲ್ಲಿ ಚಿಕನ್ ಹಾಕಿ, ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಉಪ್ಪು, ಒಂದು ಮೊಟ್ಟೆ, ನಿಂಬೆಹಣ್ಣಿನ ರಸ, ಗರಂ ಮಸಾಲ ಪೌಡರ್, ಬ್ಯಾಡಗಿ ಮೆಣಸಿನಕಾಯಿ ಪೌಡರ್, ಗುಂಟೂರು ಮಸಾಲಾ ಹಾಕಿ ಮಿಶ್ರಣ ಮಾಡಿ.

ಇದಾದ ಬಳಿಕ ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಮಸಾಲೆಯೊಂದಿಗೆ ಮಿಶ್ರಣ ಮಾಡಿಕೊಂಡ ಚಿಕನ್ ಅನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕುತ್ತಾ ಹೋಗಿ. ಚೆನ್ನಾಗಿ ಬೆಂದ ಬಳಿಕ ಕಬಾಬ್‌ ಅನ್ನು ತೆಗೆದು ಮತ್ತೊಂದು ಪಾತ್ರೆಯಲ್ಲಿ ಹಾಕಿ. ನಂತರ ಅದೇ ಕಾದ ಎಣ್ಣೆಯಲ್ಲಿ ಕರಿಬೇವು ಹಾಕಿ. ಇದೇ ಕರಿಬೇವನ್ನು ಕಬಾಬ್‌ ಮೇಲೆ ಹಾಕಿದರೆ, ಹೋಟೆಲ್ ಶೈಲಿಯಲ್ಲಿ ಕರಿಬೇವು ಕೋಳಿ ಕಬಾಬ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.