ADVERTISEMENT

ಮಕ್ಕಳಿಗೆ ಇಷ್ಟವಾಗುವ ವಿಶೇಷ ಕ್ಯಾರೆಟ್‌ ಹಲ್ವಾ ಸುಲಭವಾಗಿ ಹೀಗೆ ತಯಾರಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2026, 12:36 IST
Last Updated 3 ಜನವರಿ 2026, 12:36 IST
<div class="paragraphs"><p>ಚಿತ್ರ ಕೃಪೆ: ಗೆಟ್ಟಿ</p></div>
   

ಚಿತ್ರ ಕೃಪೆ: ಗೆಟ್ಟಿ

ಸಿಹಿತಿಂಡಿಯನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಮನೆಯಲ್ಲಿಯೇ ರುಚಿಕರವಾದ ಸಿಹಿತಿಂಡಿಗಳನ್ನು ತಯಾರಿಸಿ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಅದರಂತೆ ಕ್ಯಾರೆಟ್‌ನಿಂದ ತಯಾರಿಸುವ ವಿವಿಧ ಆಹಾರಗಳ ಪೈಕಿ ‘ಗಜರ್ ಕಾ ಹಲ್ವಾ’ (ಕ್ಯಾರೆಟ್‌ ಹಲ್ವಾ) ಪ್ರಸಿದ್ಧವಾದ ಸಿಹಿತಿಂಡಿಯಾಗಿದೆ. ಮನೆಯಲ್ಲಿಯೇ ‘ಗಜರ್ ಕಾ ಹಲ್ವಾ’ವನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ. 

ಬೇಕಾಗುವ ಸಾಮಾಗ್ರಿಗಳು:

ADVERTISEMENT
  • ಕ್ಯಾರೆಟ್

  • ಹಾಲು

  • ಸಕ್ಕರೆ

  • ತುಪ್ಪ

  • ಖೋಯಾ 

  • ಏಲಕ್ಕಿ

  • ಬಾದಾಮಿ

  • ಗೋಡಂಬಿ

  • ಪಿಸ್ತಾ

  • ಒಣದ್ರಾಕ್ಷಿ

  • ಕೇಸರಿ

ತಯಾರಿಸುವ ವಿಧಾನ:

ಮೊದಲಿಗೆ ಕ್ಯಾರೆಟ್‌ ಅನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ. ಬಳಿಕ ಕ್ಯಾರೆಟ್‌ನ ಚಿಪ್ಪೆಯನ್ನು ತೆಗೆಯಿರಿ. ಚಿಪ್ಪೆಯನ್ನು ತೆಗೆದ ಕ್ಯಾರೆಟ್‌ ಅನ್ನು ಚಾಕು ಬಳಸಿ ಅಕ್ಕಿ ಕಾಳಿನ ಗಾತ್ರದಲ್ಲಿ ಸಣ್ಣದಾಗಿ ಹಚ್ಚಬೇಕು.  ಸಣ್ಣದಾಗಿ ಕತ್ತರಿಸಿಟ್ಟುಕೊಂಡ ಕ್ಯಾರೆಟ್‌ ಅನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ಪ್ರಮಾಣದ ಹಾಲು ಸೇರಿಸಿ ಚೆನ್ನಾಗಿ ಬೇಯಿಸಿ( ಹಾಲು ಹಿಂಗುವ ತನಕ). ಬಳಿಕ ಬೇಯಿಸಿದ ಕ್ಯಾರೆಟ್‌ ಗಟ್ಟಿಯಾಗುತ್ತದೆ. 

ನಂತರ 2ರಿಂದ 3 ಚಮಚ ತುಪ್ಪವನ್ನು ಸೇರಿಸಿ. ಇದರ ಜೊತೆಗೆ ಬಾದಾಮಿ, ಗೋಡಂಬಿ, ಪಿಸ್ತಾ ಹಾಗೂ ಒಣದ್ರಾಕ್ಷಿಯನ್ನು ಹಾಕಿ ತಿಳಿ ಹಳದಿ ಬಣ್ಣಕ್ಕೆ ತಿರುಗುವ ವರೆಗೂ ಕಡಿಮೆ ಉರಿಯಲ್ಲಿ ಬೇಯಿಸಿರಿ. ನಂತರ ಪುಡಿ ಮಾಡಿ ಇಟ್ಟುಕೊಂಡ ಏಲಕ್ಕಿ, ಕೇಸರಿ ಹಾಗೂ ಖೋಯಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸಕ್ಕರೆಯನ್ನು ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ. ಬಳಿಕ ರುಚಿಯಾದ ‘ಗಜರ್ ಕಾ ಹಲ್ವಾ’ ತಯಾರಾಗುತ್ತದೆ. ಇದನ್ನು 3ರಿಂದ 4 ದಿನಗಳ ಕಾಲ ರೆಫ್ರಿಜರೇಟರ್‌ನಲ್ಲಿಟ್ಟು ಸೇವಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.