ADVERTISEMENT

ರೆಸಿಪಿ | ಗ್ರೀನ್ ಮಸಾಲಾ ಚಿಕನ್ ಫ್ರೈ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 12:49 IST
Last Updated 22 ನವೆಂಬರ್ 2025, 12:49 IST
   

ಒಂದೇ ರೀತಿಯ ಚಿಕನ್ ಸಾಂಬಾರ್ ತಿಂದು ಬೇಜಾರಾಗಿದ್ದರೆ, ಗ್ರೀನ್ ಮಸಾಲಾ ಚಿಕನ್ ಫ್ರೈ ಮಾಡಿಕೊಳ್ಳಿ. ಇದನ್ನು ಸುಲಭ ವಿಧಾನದಲ್ಲಿ ಮಾಡುವುದು ಹೇಗೆ ಎಂಬುವುದರ ಮಾಹಿತಿ ಇಲ್ಲಿದೆ.


ಗ್ರೀನ್ ಮಸಾಲಾ  ಚಿಕನ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು 
ಅರ್ಧ ಕೆಜಿ ಚಿಕನ್
4–5 ಹಸಿರು ಮೆಣಸಿನಕಾಯಿ
2–3 ಕೆಂಪು ಮೆಣಸಿನಕಾಯಿ

ಅರ್ಧ ಕಪ್ ಪುದೀನಾ

ADVERTISEMENT

ಅರ್ಧ ಕಪ್ ಕೊತ್ತಂಬರಿ ಸೊಪ್ಪು

ಗರಂ ಮಸಾಲಾ(ಚಕ್ಕೆ,ಲವಂಗ, ದಾಲ್ಚಿನ್ನಿ) ಅಗತ್ಯಕ್ಕೆ ತಕ್ಕಷ್ಟು
ಕಾಯಿತುರಿ
1–2 ಈರುಳ್ಳಿ
ಟೊಮೆಟೊ
ಅರಿಶಿಣ ಪುಡಿ
1 ಚಮಚ ಕೊತ್ತಂಬರಿ ಬೀಜ
ಕಾಲು ಚಮಚ ಜೀರಿಗೆ
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಒಂದೆರಡು ಕಾಳು ಮೆಣಸು
ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಹುಣಸೆ ಹಣ್ಣು ಅಥವಾ ನಿಂಬೆ ಹಣ್ಣು

ಮಾಡುವ ವಿಧಾನ : ಒಂದು ಬಾಣಲೆಯಲ್ಲಿ 1–2 ಚಮಚ ಅಡುಗೆ ಎಣ್ಣೆ ಹಾಕಿ. ಅದಕ್ಕೆ ತೊಳೆದು ಹೆಚ್ಚಿಕೊಂಡ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಗರಂ ಮಸಾಲ, ಕೊತ್ತಂಬರಿ ಬೀಜ, ಜೀರಿಗೆ,  ಟೊಮೊಟೊವನ್ನು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ, ಹಾಗೂ ಕಾಯಿ ತುರಿಯನ್ನು ಸೇರಿಸಿ ಮತ್ತೆ ಒಂದೆರಡು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. 

ನಂತರ ಫ್ರೈ ಮಾಡಿಕೊಂಡ ಮಸಾಲಾ ತಣ್ಣಗಾದ ಬಳಿಕ ರುಬ್ಬಿಕೊಳ್ಳಿ.

ಬಳಿಕ ಒಂದು ಪಾತ್ರೆ ತೆಗೆದುಕೊಳ್ಳಿ. ನಂತರ ಅದಕ್ಕೆ1–2 ಚಮಚ ಅಡುಗೆ ಎಣ್ಣೆ ಹಾಕಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಘಮ ಬರಲು ಒಂದಡೆರಡು ಚೂರು ಪಲಾವ್ ಎಲೆ ಹಾಕಿ, ನಂತರ ಅದಕ್ಕೆ ತೊಳೆದುಕೊಂಡ ಚಿಕನ್ ಪೀಸ್‌ಗಳನ್ನು ಹಾಕಿ ಅರ್ಧ ಚಮಚ ಅರಿಶಿಣ, ಉಪ್ಪು, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಬೇಕಿದ್ದರೆ 1 ಲೋಟ ನೀರು ಹಾಕಿ ಬೇಯಲು ಬಿಡಿ. ಚಿಕನ್ ಬೆಂದ ಬಳಿಕ ರುಬ್ಬಿಕೊಂಡ ಮಸಾಲಾ ಮಿಶ್ರಣ ಹಾಗೂ ಅಗತ್ಯಕ್ಕೆ ತಕ್ಕಷ್ಟು ಹುಳಿ ಹಾಕಿ ಮಿಶ್ರಣ ಮಾಡಿ ಮುಚ್ಚಿಟ್ಟು 5–10 ನಿಮಿಷಗಳ ಕಾಲ ಬೇಯಲು ಬಿಡಿ.


ನಂತರ ಅನ್ನ, ರೊಟ್ಟಿ, ಚಪಾತಿ, ಇಡ್ಲಿ, ದೋಸೆ ಜತೆ ಸವಿಯಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.