ADVERTISEMENT

ರೆಸಿಪಿ | ಜೆಲ್ಲಿ ಸ್ಪೆಷಲ್

ಕೆ.ವಿ.ರಾಜಲಕ್ಷ್ಮಿ
Published 30 ಜೂನ್ 2023, 23:52 IST
Last Updated 30 ಜೂನ್ 2023, 23:52 IST
ಮ್ಯಾಂಗೊ ಜೆಲ್ಲಿ
ಮ್ಯಾಂಗೊ ಜೆಲ್ಲಿ   

ಹಣ್ಣುಗಳಿಂದ ಜ್ಯೂಸ್ ಮಾಡಬಹುದು. ತಿರುಳಿನಿಂದ ಜಾಮ್‌ ಮಾಡಬಹುದು. ಅಷ್ಟೇ ಅಲ್ಲ, ವಿಶಿಷ್ಟ ರುಚಿಯಿರುವ ’ಜೆಲ್ಲಿ’ಗಳನ್ನೂ ಮಾಡಬಹುದು. ಅಂಥ ‘ಜೆಲ್ಲಿ’ಗಳ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಕೆ.ವಿ.ರಾಜಲಕ್ಷ್ಮಿ.

ಮ್ಯಾಂಗೊ ಜೆಲ್ಲಿ

ಬೇಕಾಗುವ ಸಾಮಗ್ರಿ: ಮಾವಿನಹಣ್ಣಿನ ತಿಳಿ ರಸ ಅರ್ಧ ಕಪ್, ಸಕ್ಕರೆ  ಒಂದು ಕಪ್, ಕಾರ್ನ್ ಫ್ಲೋರ್ ಒಂದು ಚಮಚ, ತುಪ್ಪ ಒಂದು ಚಮಚ.

ADVERTISEMENT

ಮಾಡುವ ವಿಧಾನ: ಅರ್ಧ ಕಪ್ ನೀರಿನಲ್ಲಿ ಕಾರ್ನ್ ಫ್ಲೋರ್ ಸೇರಿಸಿ ಕಲಕಿ. ಈ ಮಿಶ್ರಣವನ್ನು ಮಾವಿನ ಹಣ್ಣಿನ ರಸಕ್ಕೆ ಬೆರೆಸಿಟ್ಟುಕೊಳ್ಳಿ.
ಬಾಣಲೆಯಲ್ಲಿ ಸಕ್ಕರೆಗೆ ಒಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿಡಿ. ಸಕ್ಕರೆ ಸಂಪೂರ್ಣ ಕರಗಿ ನೊರೆಯಾಡುವಾಗ ಮಾವಿನರಸದ ಮಿಶ್ರಣ, ತುಪ್ಪ ಸೇರಿಸಿ ಕದಡುತ್ತಿರಿ. ಮಿಶ್ರಣ ತಳ ಬಿಡುವಾಗ ಜಿಡ್ಡು ಹಚ್ಚಿದ ತಟ್ಟೆಯಲ್ಲಿ ಸುರಿಯಿರಿ. ತಣಿದ ನಂತರ ಬೇಕಾದ ಆಕಾರಕ್ಕೆ  ಕತ್ತರಿಸಿ. ಮ್ಯಾಂಗೊ ಜೆಲ್ಲಿ ಸವಿಯಲು ಸಿದ್ದ.

ಲೆಮನ್‌ ಜೆಲ್ಲಿ

ಲೆಮನ್ ಜೆಲ್ಲಿ

ಬೇಕಾಗುವ ಸಾಮಗ್ರಿ: ಮೀಡಿಯಂ ರವೆ ಒಂದು ಕಪ್, ಸಕ್ಕರೆ ಒಂದು ಕಪ್, ನಿಂಬೆ ರಸ ಅರ್ಧ ಚಮಚ, ತುಪ್ಪ ಒಂದು ಚಮಚ.   

ಮಾಡುವ ವಿಧಾನ: ರವೆಯನ್ನು ಎರಡು ಕಪ್ ನೀರು ಹಾಕಿ ಅರ್ಧ ಗಂಟೆ ನೆನೆಸಿ, ನಂತರ ಮಿಕ್ಸಿಯಲ್ಲಿ  ಒಂದು ಸುತ್ತು ಅರೆದು ಹಾಲು ಸೋಸಿಕೊಳ್ಳಿ. 
ಬಾಣಲೆಯಲ್ಲಿ ಸಕ್ಕರೆಗೆ ಒಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿಡಿ. ಸಕ್ಕರೆ ಸಂಪೂರ್ಣ ಕರಗಿ ನೊರೆಯಾಡುವಾಗ ರವೆಹಾಲು,ನಿಂಬೆರಸ ಸೇರಿಸಿ ಕದಡುತ್ತಿರಿ. ಮಿಶ್ರಣ ಚೆನ್ನಾಗಿ ಬೆಂದು ಹಲ್ವದ ಹದ ಬರುವಾಗ ತುಪ್ಪ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಗೊಟಾಯಿಸಿ, ಜಿಡ್ಡು ಹಚ್ಚಿದ ತಟ್ಟೆಯಲ್ಲಿ ಸುರಿಯಿರಿ. ತಣಿದ ನಂತರ ಬಿಲ್ಲೆಗಳಾಗಿ ಕತ್ತರಿಸಿ.   

ಆರೆಂಜ್ ಜೆಲ್ಲಿ

ಆರೆಂಜ್ ಜೆಲ್ಲಿ

ಬೇಕಾಗುವ ಸಾಮಗ್ರಿ :ಕಿತ್ತಳೆಹಣ್ಣಿನ ರಸ – ಅರ್ಧ ಕಪ್, ಸಕ್ಕರೆ ಒಂದು ಕಪ್, ಕಾರ್ನ್ ಫ್ಲೋರ್ ಒಂದು ಚಮಚ, ತುಪ್ಪ ಒಂದು ಚಮಚ. 

ಮಾಡುವ ವಿಧಾನ: ಅರ್ಧ ಕಪ್ ನೀರಿನಲ್ಲಿ ಕಾರ್ನ್ ಫ್ಲೋರ್ ಸೇರಿಸಿ  ಕಲಕಿ. ಈ ಮಿಶ್ರಣವನ್ನು ಕಿತ್ತಳೆ  ಹಣ್ಣಿನ ರಸಕ್ಕೆ ಬೆರೆಸಿಟ್ಟುಕೊಳ್ಳಿ.
ಬಾಣಲೆಯಲ್ಲಿ ಸಕ್ಕರೆಗೆ ಒಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿಡಿ. ಸಕ್ಕರೆ ಸಂಪೂರ್ಣ ಕರಗಿ ನೊರೆಯಾಡುವಾಗ ಕಿತ್ತಳೆ  ಹಣ್ಣಿನ ರಸ  ಮಿಶ್ರಣ, ತುಪ್ಪ ಸೇರಿಸಿ ಕದಡುತ್ತಿರಿ. ಮಿಶ್ರಣ ತಳ ಬಿಡುವಾಗ ಜಿಡ್ಡು ಹಚ್ಚಿದ ತಟ್ಟೆಯಲ್ಲಿ ಸುರಿದು, ತಣಿದ ನಂತರ ಬೇಕಾದ ಆಕಾರಕ್ಕೆ  ಕತ್ತರಿಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.