
ಅನೇಕರು ಸಿಹಿ ತಿನಿಸುಗಳು ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಬ್ಬ, ಶುಭ ಸಂದರ್ಭಗಳಲ್ಲಿ ಸಿಹಿತಿನಿಸುಗಳಿಗೇ ಆದ್ಯತೆ. ದೇಶದಾದ್ಯಂತ ಅನೇಕ ಕಡೆಗಳಲ್ಲಿ ಒಂದೊಂದು ರೀತಿಯ ಸಿಹಿ ತಿನಿಸು ಪ್ರಸಿದ್ಧಿ ಪಡೆದಿದೆ.
ಹಿಂದಿನಿಂದಲೂ ರುಚಿ, ಆಕಾರ, ವೈವಿದ್ಯತೆಗಳಿಂದ ಕೂಡಿರುವ ಬೆಂಗಾಳಿ ಸಿಹಿ ತಿನಿಸುಗಳು ದೇಶದಾದ್ಯಂತ ಜನಪ್ರಿಯತೆ ಪಡೆದಿವೆ. ಹೀಗಾಗಿಯೇ ಕೋಲ್ಕತ್ತವನ್ನು ‘ದೇಶದ ಸಿಹಿತಿನಿಸುಗಳ ರಾಜಧಾನಿ’ ಎಂದು ಕರೆಯುತ್ತಾರೆ.
ಕೋಲ್ಕತ್ತದ ಜನಪ್ರಿಯ ಸಿಹಿತಿನಿಸುಗಳು
ರಸಗುಲ್ಲಾ
ಹಾಲಿನಿಂದ ತಯಾರಿಸಿ ಸಕ್ಕರೆ ಪಾನಕದಲ್ಲಿ ನೆನೆಸಿದ, ಮೃದುವಾದ ‘ರಸಗುಲ್ಲಾ’ ಕೋಲ್ಕತ್ತ ಜನರ ನೆಚ್ಚಿನ ಸಿಹಿ ತಿನಿಸಾಗಿದೆ. ದಕ್ಷಿಣ ಭಾರತದಲ್ಲೂ ರಸಗುಲ್ಲಾ ಪ್ರಿಯರಿದ್ದಾರೆ.
ಮಿಷ್ಟಿ ದೋಯಿ (ಸಿಹಿ ಮೊಸರು)
ಮಿಷ್ಟಿ ದೋಯಿ ಅಥವಾ ಸಿಹಿ ಮೊಸರು ಬೆಂಗಾಳಿ ಮನೆಗಳಲ್ಲಿ ಹೆಚ್ಚಾಗಿ ಮಾಡುವ ಸಿಹಿ ತಿನಿಸು. ಇದನ್ನು ಮಾಡಲು ಮಣ್ಣಿನ ಮಡಿಕೆಯನ್ನು ಬಳಸಲಾಗುತ್ತದೆ.
ಚಂಪಾಕಲಿ
ಹಾಲು, ನಿಂಬೆ ರಸ, ಅರಿಸಿನ, ಮೈದಾ ಹಿಟ್ಟು, ಸಕ್ಕರೆಯಿಂದ ತಯಾರಿಸಲ್ಪಟ್ಟ ಚಂಪಾಕಲಿಯೂ ಅಲ್ಲಿನ ಜನಪ್ರಿಯ ಖಾದ್ಯವಾಗಿದೆ.
ನೋಲೆನ್ ಗುರ್ (ಖರ್ಜೂರದ ಬೆಲ್ಲ)
ಖರ್ಜೂರ ಹಾಗೂ ಬೆಲ್ಲದಿಂದ ತಯಾರಿಸಿದ ಈ ಸ್ವೀಟ್ ಕೂಡ ಕೋಲ್ಕತ್ತ ಜನರ ನೆಚ್ಚಿನ ಸಿಹಿ ತಿನಿಸಾಗಿದೆ.
ಸಂದೇಶ್
ಸಕ್ಕರೆ, ಕೇಸರಿ, ಪಿಸ್ತಾ ಸೇರಿದಂತೆ ಇತರೆ ವಸ್ತುಗಳಿಂದ ತಯಾರಿಸಲ್ಪಟ್ಟ ಸಂದೇಶ್ ಸಿಹಿಯೂ ಕೋಲ್ಕತ್ತದ ಪ್ರಮುಖ ಸಿಹಿ ತಿನಿಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.