

ಮೆಂತ್ಯೆಸೊಪ್ಪು, ಮೊಳಕೆ ಕಾಳಿನ ಆಹಾರವು ಅನೇಕ ಪೋಷಕಾಂಶಗಳಿಂದ ಕೂಡಿರುತ್ತದೆ. ಈ ಸಲಾಡ್ ಅನ್ನು ದೇಹ ಸದೃಢತೆ ಬಯಸುವವರು ಇತರರು ಸೇವಿಸಬಹುದಾಗಿದೆ. ಬಹು ಬೇಗನೆ ಆಗುವ ಮೆಂತ್ಯೆಸೊಪ್ ಸಲಾಡ್ ಬಗ್ಗೆ ಇಲ್ಲಿದೆ ಮಾಹಿತಿ.
ಮೆಂತ್ಯೆಸೊಪ್ಪು-ಮೊಳಕೆ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು
ತೊಳೆದು ಹೆಚ್ಚಿಕೊಂಡ ಮೆಂತ್ಯೆಸೊಪ್ಪು – 1 ಕಪ್
ಮೊಳಕೆ ಕಟ್ಟಿದ ಹೆಸರು ಕಾಳು : 2 ಕಪ್
ಮೂಲಂಗಿ ತುರಿ: ಅರ್ಧ ಕಪ್
ಹೆಚ್ಚಿಕಪಂಡ ಟೊಮೆಟೊ : ½ ಕಪ್
ನಿಂಬೆ ರಸ : 1 ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ ತುರಿ : ಅರ್ಧ ಕಪ್
ಒಗ್ಗರಣೆಗೆ : ಸಾಸಿವೆ, ಇಂಗು ಮತ್ತು ಹಸಿರುಮೆಣಸಿನ ಕಾಯಿ
ಮಾಡುವ ವಿಧಾನ
ತರಕಾರಿಗಳನ್ನೆಲ್ಲ ಒಟ್ಟಿಗೆ ಬೆರೆಸಿ. ಬಳಿಕ ಇದಕ್ಕೆ ಕಾಯಿ ತುರಿ, ಉಪ್ಪು, ನಿಂಬೆರಸ ಸೇರಿಸಿ ಕೆಲ ನಿಮಿಷಗಳವರೆಗೆ ಬಿಡಿ. ನಂತರ ಸಾಸಿವೆ, ಇಂಗು, ಹಸಿರುಮೆಣಸಿನಕಾಯಿ ಒಗ್ಗರಣೆ ಮಾಡಿ ಸ್ಯಾಲಡ್‌ಗೆ ಹಾಕಿ.*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.