ADVERTISEMENT

ಹೊಸ ವರ್ಷಕ್ಕೆ ಪರ್ಸಿಮನ್ ಪುಡಿಂಗ್ ಕೇಕ್: ಸಕ್ಕರೆ ಹಾಕದೆ ಮನೆಯಲ್ಲೇ ತಯಾರಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2025, 11:01 IST
Last Updated 29 ಡಿಸೆಂಬರ್ 2025, 11:01 IST
<div class="paragraphs"><p>ಪರ್ಸಿಮನ್ ಪುಡಿಂಗ್ ಕೇಕ್</p></div>

ಪರ್ಸಿಮನ್ ಪುಡಿಂಗ್ ಕೇಕ್

   

ಎಐ ಚಿತ್ರ

ಪರ್ಸಿಮನ್ ಎಂಬುದು ವಿದೇಶಿ ಕಾಡು ಹಣ್ಣು. ಆಕಾರಕ್ಕೆ ಅನುಗುಣವಾಗಿ ಇದರಲ್ಲಿ ಎರಡು ವಿಧಗಳಿವೆ. ಒಂದು ಚಪ್ಪಟೆ ಆಕಾರ, ನೋಡಲು ಟೊಮೆಟೊ ರೀತಿ ಹಾಗೂ ಚಿಕ್ಕ ಗಾತ್ರದ ಸಿಹಿ ಕುಂಬಳದಂತೆ ಕಾಣುತ್ತದೆ. ಇದು ಹಣ್ಣು ಆದಾಗ ತುಂಬಾ ಸಿಹಿಯಾಗಿರುತ್ತದೆ.

ADVERTISEMENT

ಈ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಯಾಕ್ಸಿಡೆಂಟುಗಳು ಸಮೃದ್ಧವಾಗಿರುತ್ತವೆ. ಇದನ್ನು ಒಣಗಿಸಿ ತಿನ್ನಲೂ ರುಚಿಯಾಗಿರುತ್ತದೆ. ಕುಕ್ಕೀಸ್, ಕೇಕ್, ಮಫಿನ್, ಪುಡ್ಡಿಂಗ್, ಸಲಾಡ್, ಬ್ರೆಡ್, ಬೆಳಗಿನ ಉಪಾಹಾರಗಳಲ್ಲೂ ಬಳಸುತ್ತಾರೆ. ಅಷ್ಟೇ ಅಲ್ಲ ಈ ಹಣ್ಣುಗಳಿಂದ ಬಿಯರ್, ಬ್ರಾಂಡಿ ಕೂಡ ತಯಾರಿಸುತ್ತಾರೆ. ಹೊಸ ವರ್ಷಕ್ಕೆ ವಿಶೇಷವಾದ ಪರ್ಸಿಮನ್ ಪುಡಿಂಗ್ ಕೇಕ್ ಅನ್ನು ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.

ಪರ್ಸಿಮನ್ ಪುಡಿಂಗ್ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಪರ್ಸಿಮನ್ ಪುಡಿಂಗ್ ಹಣ್ಣು, ಕೋಕೋ ಪೌಡರ್, ಜೇನು ತುಪ್ಪ.

ಮಾಡುವ ವಿಧಾನ

ಮೊದಲಿಗೆ ಎರಡು ಪರ್ಸಿಮನ್ ಪುಡಿಂಗ್ ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ. ನಂತರ ಹಣ್ಣನ್ನು ಕಟ್‌ ಮಾಡಿ ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಎರಡು ಚಮಚ ಕೋಕೋ ಪೌಡರ್ ಹಾಕಿ. ನಂತರ ಒಂದು ಚಮಚ ಜೇನು ತುಪ್ಪ ಹಾಕಿ ರುಬ್ಬಿಕೊಳ್ಳಿ. ಇದಾದ ಬಳಿಕ ಒಂದು ಬಟ್ಟಲಿಗೆ ರುಬ್ಬಿಕೊಂಡ ಮಿಶ್ರಣ ಹಾಕಿ 2ರಿಂದ 3 ಗಂಟೆಯವರೆಗೆ ಫ್ರಿಡ್ಜ್‌ನಲ್ಲಿ ಇಡಿ. ನಂತರ ಆ ಕೇಕ್‌ ಅನ್ನು ಫ್ರಿಡ್ಜ್‌ನಿಂದ ಹೊರ ತೆಗೆದು ಅದರ ಮೇಲೆ ಚಾಕೋ ಪೌಡರ್ ಉದುರಿಸಿ. ಬಳಿಕ ಅದರ ಮೇಲೆ ಸಣ್ಣದಾಗಿ ಕತ್ತರಿಸಿಕೊಂಡ ಕಾಜು, ಬಾದಾಮಿ, ಪಿಸ್ತಾವನ್ನು ಉದುರಿಸಿದರೆ ಪರ್ಸಿಮನ್ ಪುಡಿಂಗ್ ಕೇಕ್ ಸಿದ್ಧವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.