
ಶೀತ, ಜ್ವರ ಬಂದರೆ ಕೆಲವರಿಗೆ ಊಟ ಸೇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸುಲಭವಾಗಿ ಟೊಮೊಟೊ ಸಾಂಬಾರ್ ಮಾಡಿ ತಿನ್ನಬಹುದು. ಬಹು ಬೇಗನೆ ಆಗುವ ಟೊಮೆಟೊ ಸಾಂಬರ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಟೊಮೊಟೊ ಸಾಂಬರ್ ಮಾಡಲು ಬೇಕಾಗುವ ಸಾಮಗ್ರಿಗಳು
2–3 ಟೊಮೊಟೊ
2–3 ಹಸಿರು ಮೆಣಸಿನಕಾಯಿ
ಒಂದೆರಡು ಕಾಳು ಮೆಣಸು
ರುಚಿಗೆ ತಕ್ಕಷ್ಟು ಉಪ್ಪು
ಹುಣಸೆ ಹುಳಿ
ಒಂದು ಹಿಡಿ ಬೆಳ್ಳುಳ್ಳಿ
ಕಾಲು (1/4) ಚಮಚ ಜೀರಿಗೆ
ಕಾಲು (1/4) ಚಮಚ ಸಾಸಿವೆ
ಕರಿ ಬೇವು
1 ಚಮಚ ಅಡುಗೆ ಎಣ್ಣೆ
ಅವಶ್ಯಕತೆ ಇದ್ದರೆ ಕಾಯಿತುರಿ
ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ತೊಳೆದು 2 ಭಾಗ ಮಾಡಿದ ಟೊಮೆಟೊ, ಜೀರಿಗೆ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಕಾಳು ಮೆಣಸು, ಹುಣಸೆ ಹಣ್ಣು ಸೇರಿಸಿ ಅದಕ್ಕೆ 1–2 ಲೋಟ ನೀರು , ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ.
ನಂತರ ಟೊಮೊಟೊ ಮಿಶ್ರಣ ಬೆಂದ ಬಳಿಕ ನೀರನ್ನು ಸೋಸಿ ತೆಗೆದುಕೊಳ್ಳಿ. ನಂತರ ಬರೀ ಟೊಮೊಟೊ ಮಿಶ್ರಣವನ್ನು ಹಾಗೂ ಅಗತ್ಯವಿದ್ದರೆ ಕಾಯಿತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ.
ನಂತರ ಒಂದು ಪಾತ್ರೆಯಲ್ಲಿ 1 ಚಮಚ ಅಡುಗೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಜಜ್ಜಿಕೊಂಡ 2 ಬೆಳ್ಳುಳ್ಳಿ ಎಸಳು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಅದಕ್ಕೆ ರುಬ್ಬಿಕೊಂಡ ಟೊಮೆಟೊ ಪೇಸ್ಟ್ ಹಾಕಿ ನಂತರ ಟೊಮೊಟೊ ಮಿಶ್ರಣ ಬೇಯಿಸಿದ ನೀರನ್ನು ಸೇರಿಸಿ ಕುದಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.