
ಎಐ ಚಿತ್ರ
ಪ್ರೇಮಿಗಳ ದಿನಚಾರಣೆ ಸಮೀಪಿಸುತ್ತಿದೆ. ಫೆ.14 ನಿಮ್ಮ ಸಂಗಾತಿಗೆ ವಿಶೇಷವಾಗಿ ಪ್ರೇಮ ನಿವೇದನೆ ಮಾಡಿ. ಜೊತೆಗೆ ಆಕೆಯ/ಆತನ ಜೊತೆಗೆ ಸೇರಿಕೊಂಡು ಮನೆಯಲ್ಲಿ ರೆಡ್ ವೆಲ್ವೆಟ್ ಕೇಕ್ ಅನ್ನು ತಯಾರಿಸಿ ವಿಶೇಷವಾಗಿ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಿ. ಅದಕ್ಕಿಂತ ಮುಂಚೆ ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದ ರೀಲ್ಸ್ ಸ್ಪರ್ಧೆ ಬಗ್ಗೆ ತಿಳಿಯಿರಿ.
ವ್ಯಾಲೆಂಟೈನ್ಸ್ ಡೇ ಅಂಗವಾಗಿ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್ ಸಹಯೋಗದೊಂದಿಗೆ ವಿಶೇಷ ರೀಲ್ಸ್ ಸ್ಪರ್ಧೆಯನ್ನು ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದೆ. ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳ ಮೌಲ್ಯ ಹಾಗೂ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುವ ಸೃಜನಾತ್ಮಕ ರೀಲ್ಸ್‌ಗಳನ್ನು ಆಹ್ವಾನಿಸಲಾಗುತ್ತಿದೆ.
ರೆಡ್ ವೆಲ್ವೆಟ್ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಡುಗೆ ಎಣ್ಣೆ, ಸಕ್ಕರೆ, ವೆನಿಲ್ಲಾ ಅಸೆಸ್, ಮೈದಾ ಹಿಟ್ಟು, ಕೋಕೋ ಪೌಡರ್, ಅಡುಗೆ ಸೋಡಾ, ಮಜ್ಜಿಗೆ, ಮೊಟ್ಟೆ, ಕೆಂಪು ಫುಡ್ ಕಲರ್.
ಮಾಡುವ ವಿಧಾನ
ಒಂದ ಪಾತ್ರೆಗೆ ಅಡುಗೆ ಎಣ್ಣೆ, ಸಕ್ಕರೆ, ವೆನಿಲ್ಲಾ ಅಸೆಸ್ ಹಾಕಿ ಮೂರು ಹಾಕಿ ಮಿಶ್ರಣ ಮಾಡಿ. ಬಳಿಕ ಅದಕ್ಕೆ ಮೈದಾ ಹಿಟ್ಟು, ಕೋಕೋ ಪೌಡರ್, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮಜ್ಜಿಗೆ ಹಾಲು, ಅಥವಾ ಮೊಟ್ಟೆ ಹಾಕಿ ಗಂಟುಗಳು ಬರದ ಹಾಗೇ ನಿಧಾನಕ್ಕೆ ಮಿಶ್ರಣ ಮಾಡಿ. ಬಳಿಕ ಒಂದು ಚಮಚ ಕೆಂಪು ಫುಡ್ ಕಲರ್ ಅದಕ್ಕೆ ಸೇರಿಸಿ ಮತ್ತೆ ಮಿಶ್ರಣ ಮಾಡಬೇಕು.
ಈ ಪ್ರಕ್ರಿಯೆ ಮುಗಿದ ಬಳಿಕ ಕೇಕ್ ಬೇಯಿಸುವ ಪಾತ್ರೆಗೆ ತುಪ್ಪ ಸವರಿ, ಅದರ ಮೇಲೆ ಬಟರ್ ಪೇಪರ್ ಹಾಕಿ. ನಂತರ ಮೇಲೆ ತಿಳಿಸಿದ ಮಿಶ್ರಣವನ್ನು ಸೇರಿಸಿ. ಇದಾದ ನಂತರ ಒಂದು ಕಡಾಯಿಯಲ್ಲಿ ಚಿಕ್ಕ ಸ್ಟಾಂಡ್ ಅನ್ನು ಇಟ್ಟು ಅದಕ್ಕೆ ಫ್ರೀ ಹಿಟ್ ನೀಡಿ. ನಂತರ ಫ್ರೀ ಹಿಟ್ ಮಾಡಿಕೊಂಡಿಟ್ಟ ಕಡಾಯಿಯ ಸ್ಟಾಂಡ್ ಮೇಲೆ ಬೇಯಿಸುವ ಪಾತ್ರೆ ಇಡಿ. ಸಣ್ಣ ಉರಿಯಲ್ಲಿ 30ರಿಂದ 45 ನಿಮಿಷದವರೆಗೆ ಬೇಯಲು ಬಿಡಿ. ಇದಾದ ಬಳಿಕ ಪಾತ್ರೆಯನ್ನು ಹೊರ ತೆಗೆದು ಅದನ್ನು ಹಾರ್ಟ್ ಆಕಾರದಲ್ಲಿ ಕತ್ತರಿಸಿ ಇಟ್ಟರೆ ವಿಶೇಷವಾದ ರೆಡ್ ವೆಲ್ವೆಟ್ ಕೇಕ್ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.