ದೀರ್ಘ ಕಾಲದ ಸುಟ್ಟ ಕಲೆಗಳು ಮುಖದ ಅಂದಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಈ ಸಮಸ್ಯೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.
ಸುಟ್ಟ ಕಲೆಗಳ ನಿವಾರಣೆಗೆ ಇಲ್ಲಿವೆ ಸರಳ ಮನೆಮದ್ದುಗಳು
‘ಶತ ಧೌತ ಘೃತ’ ಎಂಬ ಆಯುರ್ವೇದ ಔಷಧಿಯನ್ನು ರಾತ್ರಿ ಮಲಗುವಾಗ ಸುಟ್ಟ ಕಲೆಗಳ ಮೇಲೆ ಹಚ್ಚಿ, ಬೆಳಗ್ಗೆ ಬರೀ ನೀರಿನಲ್ಲಿ ಮುಖ ತೊಳೆದು, ಸ್ವಲ್ಪ ಹೊತ್ತಿನ ಬಳಿಕ ಸೋಪಿನಿಂದ ಮುಖ ತೊಳೆಯಿರಿ.
ಕಲೆಗಳ ಮೇಲೆ ನಿರಂತರವಾಗಿ ಜೇನು ತುಪ್ಪ, ಅಥವಾ ನಾಟಿ ತುಪ್ಪವನ್ನು ಹಚ್ಚುತ್ತಿರಬೇಕು.
ತ್ರಿಫಲ ಘೃತವನ್ನು ತುಪ್ಪದ ಜತೆ ಸೇರಿಸಿ ಹಚ್ಚುವುದರಿಂದ ಸುಟ್ಟ ಕಲೆಗಳು ನಿವಾರಣೆ ಆಗುತ್ತವೆ.
ಲೋಳೆಸರವನ್ನು (ಅಲೋವೆರಾ) ನೇರವಾಗಿ ಹಚ್ಚಬಹುದು. ಅಥವಾ ನಿಂಬೆರಸ, ಸಕ್ಕರೆ ಜತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಸುಟ್ಟ ಕಲೆಗಳು ಮಾಯವಾಗುತ್ತವೆ.
ಸುಟ್ಟ ಕಲೆಗಳ ಮೇಲೆ ಅರಿಶಿಣ ಜತೆ ಸೌತೆಕಾಯಿ ಪೇಸ್ಟ್ ಅನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಕಲೆಗಳು ನಿವಾರಣೆ ಆಗುತ್ತವೆ ಎಂದು ಆಯುರ್ವೇದ ವೈದ್ಯರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.