ADVERTISEMENT

ದಿನಕ್ಕೊಂದು ಸಪೋಟ ಹಣ್ಣು ಸೇವಿಸಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2026, 11:17 IST
Last Updated 21 ಫೆಬ್ರುವರಿ 2026, 11:17 IST
<div class="paragraphs"><p>ಗೆಟ್ಟಿ ಚಿತ್ರ</p></div>

ಗೆಟ್ಟಿ ಚಿತ್ರ

   

ಅನೇಕರು ಇಷ್ಟ ಪಟ್ಟು ಸೇವಿಸುವ ಹಣ್ಣುಗಳಲ್ಲಿ ಸಪೋಟ ಹಣ್ಣು ಕೂಡ ಒಂದು. ಚಿಕ್ಕು, ಸ್ಪಾಡಿಲ್ಲಾ ಫ್ರೂಟ್, ಸಪೋಡಿಲ್ಲಾ ಪ್ಲಮ್ ಎಂದು ಕರೆಸಿಕೊಳ್ಳುವ ಈ ಹಣ್ಣು ಕ್ಯಾಲ್ಸಿಯಂ, ರಂಜಕ, ಕಬ್ಬಿಣದ ಅಂಶಗಳನ್ನು ಹೊಂದಿದೆ. ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ಒತ್ತಡ ನಿವಾರಣೆ

ADVERTISEMENT

ಗೆಟ್ಟಿ ಚಿತ್ರ

ಸಪೋಟ ಹಣ್ಣಿನಲ್ಲಿ ಸೆಡೆಟಿನ್ ಅಂಶ ಹೇರಳವಾಗಿದ್ದು ಒತ್ತಡವನ್ನು ಕಡಿಮೆ ಮಾಡಿ ನರಗಳನ್ನು ಶಾಂತಗೊಳಿಸುತ್ತದೆ. ಪ್ರತಿದಿನ ಒಂದು ಸಪೋಟ ಹಣ್ಣನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆ, ಆತಂಕ, ಖಿನ್ನತೆಯಿಂದ ಪಾರಾಗಲು ಸಹಕಾರಿ. 

ರೋಗ ನಿರೋಧಕ  ಹೆಚ್ಚಳ

ಗೆಟ್ಟಿ ಚಿತ್ರ

ಸಪೋಟದಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹಲವು ಸೋಂಕುಗಳಿಂದ ದೇಹವನ್ನು ರಕ್ಷಿಸಲು ಸಹಕಾರಿ.

ಕರುಳು, ಜಠರದ ಆರೋಗ್ಯಕ್ಕೆ ಉಪಯುಕ್ತ

ಗೆಟ್ಟಿ ಚಿತ್ರ

ನಿಯಮಿತವಾಗಿ ಚಿಕ್ಕು ಹಣ್ಣನ್ನು ಸೇವನೆ ಮಾಡುವುದರಿಂದ ದೊಡ್ಡ ಕರುಳಿನ ಒಳಚರ್ಮವನ್ನು ಕಾಪಾಡಲು ಸಹಕರಿಸುತ್ತದೆ. ಅಲ್ಲದೆ ಈ ಹಣ್ಣಿನ ಸೇವನೆಯಿಂದ ಜೀರ್ಣಾಂಗದ ಕ್ರಿಯೆಗೆ ಒಳ್ಳೆಯದು.

ಗರ್ಭಿಣಿಯರಿಗೆ ಆರೋಗ್ಯಕ್ಕೆ ಉಪಯುಕ್ತ

ಗೆಟ್ಟಿ ಚಿತ್ರ

ಸಪೋಟದಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಈ ಹಣ್ಣಿನ ಸೇವನೆಯಿಂದ ವಾಕರಿಕೆ, ತಲೆ ತಿರುಗುವುದು, ಸುಸ್ತು ನಿಯಂತ್ರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.