ADVERTISEMENT

ದಾಲ್ಚಿನ್ನಿ ಸೇವನೆಯಲ್ಲಿದೆ ಆರೋಗ್ಯದ ಗುಟ್ಟು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 10:43 IST
Last Updated 10 ಫೆಬ್ರುವರಿ 2026, 10:43 IST
<div class="paragraphs"><p>ದಾಲ್ಚಿನ್ನಿ</p></div>

ದಾಲ್ಚಿನ್ನಿ

   

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಭಾರತದ ಅಡುಗೆ ಮನೆಗಳಲ್ಲಿ ದಾಲ್ಚಿನ್ನಿ ಪ್ರಮುಖ ಮಸಾಲೆ ಪದಾರ್ಥವಾಗಿದೆ. ಸುವಾಸನೆಯ ಜೊತೆಗೆ ಆರೋಗ್ಯಕ್ಕೂ ಹೆಸರುವಾಸಿಯಾಗಿದೆ. ಇದನ್ನು ಕೆಲವು ಔಷಧಿಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಬಹು ಉಪಯೋಗಿ ಮಸಾಲೆ ಪದಾರ್ಥದ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬ ಮಾಹಿತಿ ಇಲ್ಲಿದೆ.

ADVERTISEMENT

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: 

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: 

ದಾಲ್ಚಿನ್ನಿ ಮುಖ್ಯವಾಗಿ ಇನ್ಸುಲಿನ್ ಸುಧಾರಿಸುವ ಗುಣ ಹೊಂದಿದೆ. ಸಾಮಾನ್ಯವಾಗಿ ವಿವಿಧ ಆಹಾರಗಳ ಸೇವನೆಯಿಂದ ರಕ್ಕದಲ್ಲಿ ಸಕ್ಕರೆ ಮಟ್ಟದ ಏರಿಳಿತ ಉಂಟಾಗುತ್ತದೆ. ಇದನ್ನು ದಾಲ್ಚಿನ್ನಿ ಸರಿದೂಗಿಸುತ್ತದೆ.

ಹೃದಯದ ಆರೋಗ್ಯಕ್ಕೆ ಸಹಕಾರಿ

ಹೃದಯದ ಆರೋಗ್ಯಕ್ಕೆ ಸಹಕಾರಿ

ಮಸಾಲೆ ಪದಾರ್ಥವಾದ ದಾಲ್ಚಿನ್ನಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಅಗತ್ಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ದವಾಗಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಅನುಕೂಲವಾಗಿದೆ. ಜೊತೆಗೆ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ..

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಅಜೀರ್ಣದಂತಹ ಸಮಸ್ಯೆಗೆ ದಾಲ್ಚಿನ್ನಿ ರಾಮಬಾಣವಾಗಿದೆ. ಹೊಟ್ಟೆ ಉಬ್ಬುವಿಕೆ ಅಥವಾ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಡುಗೆಯಲ್ಲಿ ನಿಯಮಿತ ಪ್ರಮಾಣದಲ್ಲಿ ಸೇರಿಸಿದರೆ ಸಾಕಾಗುತ್ತದೆ.

ತೂಕದ ನಿರ್ವಹಣೆ

ತೂಕದ ನಿರ್ವಹಣೆ

‌ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗಿ ನಡೆಯುತ್ತದೆ. ಇದರಿಂದಾಗಿ ದೇಹದಲ್ಲಿನ ಕೊಬ್ಬು ಕರಗುತ್ತದೆ. ದಾಲ್ಚಿನ್ನಿಯು ದೇಹಕ್ಕೆ ನೈಸರ್ಗಿಕ ಸಿಹಿ ಸಕ್ಕರೆಯನ್ನು ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.