
ಪ್ರಾತಿನಿಧಿಕ ಚಿತ್ರ
ಹಲ್ಲು ನೋವು ಎಲ್ಲಾ ವಯಸ್ಸಿನವರಿಗೂ ಕಾಡುವ ಸಮಸ್ಯೆಯಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಬಾಯಿ ದುರ್ವಾಸನೆಗೆ ಹುಳುಕು ಹಲ್ಲುಗಳು ಕೂಡ ಕಾರಣವಾಗಿವೆ. ಈ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರು ನೀಡಿರುವ ಕೆಲವು ಸಲಹೆ ಇಲ್ಲಿವೆ.
ಹಲ್ಲುಗಳ ಮೇಲೆ ಕಪ್ಪು ಚುಕ್ಕೆ, ಹಲ್ಲುಗಳು ತುಂಡಾಗುವುದು, ನೋವು ಕಾಣಿಸುವುದು, ಸೇವನೆ ಮಾಡಿದ ಆಹಾರ ಹಲ್ಲಿನ ಸಂಧಿಯಲ್ಲಿ ಸಿಕ್ಕಿಕೊಳ್ಳುವುದು. ಇವೆಲ್ಲವೂ ಹುಳುಕು ಹಲ್ಲುಗಳ ಲಕ್ಷಣವಾಗಿದೆ.
ಪರಿಹಾರ ಕ್ರಮಗಳು
ಆಹಾರ ಸೇವನೆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು
ಪ್ರತಿದಿನ ಬೆಳಗ್ಗೆ– ರಾತ್ರಿ ಹಲ್ಲು ಉಜ್ಜಬೇಕು
ಅರಿಶಿನ ಪುಡಿಯನ್ನು ನೀರು ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಲ್ಲು ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಬಹುದು.
ಉಗುರು ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಹುಳುಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತಡೆಯಬಹುದು.
ಪುದೀನಾ ಎಲೆಗಳನ್ನು ಹುಳುಕು ಹಲ್ಲಿನ ಮೇಲೆ ಇಟ್ಟುಕೊಳ್ಳಬಹುದು ಅಥವಾ ಬಿಸಿ ನೀರಿನಲ್ಲಿ ಈ ಎಲೆಗಳನ್ನು ನೆನೆಸಿಟ್ಟು ಆ ನೀರನಿಂದ ಬಾಯಿ ಮುಕ್ಕಳಿಸಬಹುದು.
ಚಿಟಿಕೆಯಷ್ಟು ಬೆಳ್ಳುಳ್ಳಿ ರಸವನ್ನು ಹಲ್ಲು ಸಂಧಿಯಲ್ಲಿ 5ರಿಂದ10 ನಿಮಿಷ ಇಟ್ಟುಕೊಳ್ಳುವುದರಿಂದ ಹಲ್ಲು ನೋವು ಶಮನವಾಗುವುದು.
ವಾರದಲ್ಲಿ ಒಂದೆರಡು ಬಾರಿಯಾದರೂ ಬೆಳ್ಳುಳ್ಳಿ ಬಳಕೆ ಮಾಡುವುದರಿಂದ ಹುಳುಕು ಹಲ್ಲಿನ ಸಮಸ್ಯೆಯಿಂದ ಪಾರಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.