
ಚಿತ್ರ: ಗೆಟ್ಟಿ
ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ 4/3 ಕ್ಕಿಂತ ಹೆಚ್ಚು ಜನರು ಶಿಫಾರಸ್ಸು ಮಾಡಿದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇವಿಸುತ್ತಿಲ್ಲ, ಇದು ಜಾಗತಿಕವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ
ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇವಿಸಲು ಆರೋಗ್ಯಕರ ಕೊಬ್ಬಿನ ಮೂಲಗಳಾದ ಸಾಲ್ಮನ್ ಮೀನು, ಅಗಸೆ ಬೀಜ ಮತ್ತು ಚಿಯಾ ಬೀಜಗಳು ಸೇವಿಸಿಬೇಕು ಎಂದು ಅಧ್ಯಯನವು ಬಹಿರಂಗಪಡಿಸಿದೆ.
ದೇಹದಲ್ಲಿ ಒಮೆಗಾ -3 ಕೊಬ್ಬಿನಾಮ್ಲ ಕಡಿಮೆಯಾಗಲು ಐಕೋಸಾಪೆಂಟೆನೊಯಿಕ್ ಆಮ್ಲ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲ (ಡಿಎಚ್‌ಎ)ಗಳ ಸೇವನೆಯ ನಿರ್ಲಕ್ಷ್ಯವೇ ಕಾರಣ. ಅಲ್ಲದೇ ಗರ್ಭಿಣಿಯರಿಗೆ ಹಾಗೂ ಮೀನನ್ನು ಕಡಿಮೆ ಸೇವಿಸುವವರು ಒಮೆಗಾ -3 ಕೊರತೆ ಕಂಡು ಬಂದಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಗರ್ಭಿಣಿಯರು ದಿನಕ್ಕೆ 250 ಗ್ರಾಂ ಐಕೋಸಾಪೆಂಟೆನೊಯಿಕ್ ಆಮ್ಲ ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲವನ್ನು ತೆಗೆದುಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ದಿನಕ್ಕೆ 100 ರಿಂದ 200 ಗ್ರಾಂ ಡೊಕೊಸಾಹೆಕ್ಸೆನೊಯಿಕ್ ಆಮ್ಲ ಸೇವನೆಯನ್ನು ಶಿಪಾರಸ್ಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ LCn-3PUFA ಸೇವನೆ ಶಿಫಾರಸ್ಸು ಮಾಡಿದ ದೇಶಗಳು ಅದರ ಗುರಿಗಳನ್ನು ತಲುಪಲು ವಿಫಲವಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.