
ಗೆಟ್ಟಿ ಚಿತ್ರ
ಸ್ವಭಾವತಃ ವ್ಯಕ್ತಿಯಿಂದ ವ್ಯಕ್ತಿಗೆ ವಿಶಿಷ್ಟತೆಯನ್ನು ಕಾಣಬಹುದು. ರೂಪ ಹಾಗೂ ವ್ಯಕ್ತಿತ್ವದಲ್ಲೂ ವೈವಿದ್ಯತೆ ಇರುತ್ತದೆ. ಮನೋವಿಜ್ಞಾನದಲ್ಲಿ ವ್ಯಕ್ತಿಗಳ ವರ್ತನೆ ಆಧರಿಸಿ ಅಂತರ್ಮುಖಿ, ಬಹಿರ್ಮುಖಿ ಹಾಗೂ ಉಭಯಮುಖಿ ಎಂದು ವಿಂಗಡಿಸಲಾಗುತ್ತದೆ. ಈ ಕುರಿತು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ಮಾಹಿತಿ ನೀಡಿದ್ದಾರೆ.
ಬಹಿರ್ಮುಖಿ (Extrovert)
ಇವರು ಸ್ವಭಾವತಃ ಚುರುಕು ಬುದ್ಧಿ ಹಾಗೂ ಅತೀ ಉತ್ಸಾಹಿಗಳಾಗಿರುತ್ತಾರೆ. ಇವರು ಜನರ ಜೊತೆ ಬೆರೆಯಲು ಇಷ್ಟಪಡುತ್ತಾರೆ ಎಂದು ಮನೋವಿಜ್ಞಾನ ಹೇಳುತ್ತದೆ.
ಹೊಸಬರ ಭೇಟಿ, ಅವರೊಂದಿಗೆ ಮಾತನಾಡುವುದು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇವರಿಗೆ ಶಕ್ತಿ ನೀಡುತ್ತದೆ.
ಇವರು ತಮ್ಮ ಆಲೋಚನೆ ಮತ್ತು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.
ಸಾಮಾಜಿಕ ಪರಿಸರ ಇವರಿಗೆ ಮನಶಾಂತಿ ಹಾಗೂ ಆತ್ಮವಿಶ್ವಾಸ ಒದಗಿಸುತ್ತದೆ.
ಮನೋವಿಜ್ಞಾನದಲ್ಲಿ ಬಹಿರ್ಮುಖಿಗಳು ಸಮಾಜದ ಬೇರೆ ಬೇರೆ ವ್ಯಕ್ತಿಗಳಿಂದ ಪ್ರೇರಣೆ ಪಡೆಯುತ್ತಾರೆ.
ಅಂತರ್ಮುಖಿ (Introvert)
ಇವರು ಶಾಂತ ಸ್ವಭಾವದವರು ಹಾಗೂ ಆಂತರಿಕವಾಗಿ ವಿಚಾರವಂತರೂ ಆಗಿರುತ್ತಾರೆ. ಮಾತ್ರವಲ್ಲ, ಆಳವಾದ ಚಿಂತನೆ ಹೊಂದಿರುತ್ತಾರೆ.
ಜನ ಸಮೂಹಕ್ಕಿಂತ ಸ್ವಂತದಕ್ಕೆ ಹೆಚ್ಚು ಸಮಯ ಕೊಡುತ್ತಾರೆ.
ಪ್ರತಿ ಮಾತನ್ನು ಆಲೋಚಿಸಿ ತೂಕವಾಗಿ ಮಾತನಾಡುತ್ತಾರೆ. ಅನೇಕ ಸಂದರ್ಭದಲ್ಲಿ ತಮ್ಮೊಳಗಿನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸದೆ ಒಳಗೆ ಇಟ್ಟುಕೊಳ್ಳುತ್ತಾರೆ.
ಇವರು ಹೆಚ್ಚು ಸೃಜನಾತ್ಮಕ ಹಾಗೂ ವಿಶ್ಲೇಷಣೆಯ ಮನಸ್ಥಿತಿ ಹೊಂದಿರುತ್ತಾರೆ.
ಮನೋವಿಜ್ಞಾನದಲ್ಲಿ ಅಂತರ್ಮುಖಿಗಳು ಆಂತರಿಕ ಚಿಂತನೆ ಮತ್ತು ಆತ್ಮವಲೋಕನದಿಂದ ಪ್ರೇರಣೆ ಪಡೆಯುತ್ತಾರೆ.
ಉಭಯಮುಖಿ (Ambivert)
ಇವರು ಅಂತರ್ಮುಖಿ ಮತ್ತು ಬಹಿರ್ಮುಖಿ ಇಬ್ಬರ ಸಮತೋಲನ ಗುಣಗಳನ್ನು ಹೊಂದಿರುತ್ತಾರೆ.
ಇವರು ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾರೆ. (ಕೆಲವೊಮ್ಮೆ ಚುರುಕಾಗಿ, ಕೆಲವೊಮ್ಮೆ ಮೌನವಾಗಿ)
ಜನರೊಂದಿಗೆ ಬೆರೆಯುವುದನ್ನು ಇಷ್ಟಪಡುತ್ತಾರೆ ಹಾಗೂ ಒಂಟಿಯಾಗಿಯೂ ಇರುತ್ತಾರೆ.
ಇವರು ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.