ಎಐ ಚಿತ್ರ
ಕಾಲ ಬದಲಾದಂತೆ ಮಾನವನ ಆಲೋಚನಾ ಕ್ರಮಗಳು ಕೂಡ ಬದಲಾಗುತ್ತವೆ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಮಾಜಿಕವಾಗಿ, ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬದಲಾವಣೆಗಳನ್ನು ಕಾಣಬಹುದು. ಈ ಬದಲಾವಣೆಗೆ ಪ್ರಮುಖ ಕಾರಣ ಜನರೇಷನ್ ಎಂದು ಮನಃಶಾಸ್ತ್ರ ಹೇಳುತ್ತದೆ.
ಮನಃಶಾಸ್ತ್ರಜ್ಞದ ಪ್ರಕಾರ, ಇಂದಿನ ಜನರೇಷನ್ Z (Gen Z) ಹಾಗೂ ಜನರೇಷನ್ ಆಲ್ಫಾ (Gen Alpha) ಎಂದು ಕರೆಯಲಾಗುತ್ತದೆ. ಅಂದರೆ, 2010 ರಿಂದ 2025 ರವರೆಗೆ ಜನಿಸಿದವರಾಗಿದ್ದಾರೆ. ಈ ತಲೆಮಾರಿನಲ್ಲಿ ಜನಿಸಿದವರ ಮನಸ್ಥಿತಿ ಹೇಗಿರುತ್ತದೆ? ಇವರಿಗೆ ಕಾಡುವ ಪ್ರಮುಖ ಮಾನಸಿಕ ಸಮಸ್ಯೆಗಳು ಯಾವುವು? ಎಂಬ ಮಾಹಿತಿ ನೋಡೋಣ ಬನ್ನಿ.
ಆಲೋಚನೆ:
ಈ ತಲೆಮಾರಿನವರು ಪ್ರತಿಯೊಂದು ವಿಷಯವನ್ನು ಮಾನಸಿಕವಾಗಿ ತೆಗೆದುಕೊಳ್ಳುತ್ತಾರೆ. ಮನಸ್ಸಿನಲ್ಲಿ ಮೂಡುವ ಪ್ರತಿ ಆಲೋಚನೆಗೂ ಕಾರಣಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಸುಮ್ಮನೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅದರ ಹಿಂದಿನ ತರ್ಕ, ಕಾರಣ ಹಾಗೂ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.
ಭಾವನಾತ್ಮಕ ಹೊಂದಾಣಿಕೆ:
ಈ ತಲೆಮಾರಿನವರು ಆತ್ಮವಿಶ್ವಾಸ, ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಮತ್ತು ಎಲ್ಲರೊಂದಿಗೆ ಬೇರೆಯುವುದು ಕಷ್ಟ. ಇವರು ಸದಾ ಒಂಟಿತನವನ್ನು ಬಯಸುತ್ತಾರೆ.
ಒತ್ತಡ ಮತ್ತು ಆತಂಕ:
ಇವರು ಸಣ್ಣ ವಿಚಾರಗಳಿಗೂ ಆತಂಕಕ್ಕೆ ಒಳಗಾಗುತ್ತಾರೆ. ಸದಾ ಒತ್ತಡ ಹಾಗೂ ಸವಾಲುಗಳನ್ನು ಎದುರಿಸುತ್ತಾರೆ. ಶಿಕ್ಷಣ, ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಪರಿಸರದಿಂದ ಈ ತಲೆಮಾರಿನಲ್ಲಿ ಆತಂಕ ಹೆಚ್ಚಾಗುತ್ತದೆ ಎಂದು ಮನಃಶಾಸ್ತ್ರ ಹೇಳುತ್ತದೆ.
ಗುರುತಿನ ಹುಡುಕಾಟ(identity crisis):
ಪ್ರಸ್ತುತ ತಲೆಮಾರಿನ ಮಕ್ಕಳು (ವಿಶೇಷವಾಗಿ ಹದಿಹರೆಯದವರು) ಹಿಂದೆಂದಿಗಿಂತಲೂ ಹೆಚ್ಚಾಗಿ ಗುರುತಿನ ಹುಡುಕಾಟ (Identity Exploration) ಅಥವಾ ’ಐಡೆಂಟಿಟಿ ಕ್ರೈಸಿಸ್’ ಅನ್ನು ಎದುರಿಸುತ್ತಿದ್ದಾರೆ.
ಅವರು ಕೇಳುತ್ತಿರುವ ಪ್ರಮುಖ ಪ್ರಶ್ನೆಗಳು:
ನಾನು ಯಾರು? ನನ್ನ ನಿಜವಾದ ಸ್ವಭಾವ ಏನು?
ನನ್ನ ಜೀವನದ ಉದ್ದೇಶವೇನು? ನಾನು ಇಲ್ಲಿ ಏಕೆ ಇದ್ದೇನೆ?
ಈ ಜೀವನಕ್ಕೆ ಸಾರ್ಥಕತೆಯನ್ನು ಹೇಗೆ ಕಂಡುಕೊಳ್ಳುವುದು?
ನನ್ನ ಮೌಲ್ಯಗಳು ಮತ್ತು ನಂಬಿಕೆಗಳು ಯಾವುವು?.
ಗುರುತು (Virtualizing Identity)
ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರೂ ತನ್ನನ್ನು ತಾನು ’ಆಯ್ಕೆ ಮಾಡಿದ ಆವೃತ್ತಿ’ (Curated Version)ಯಲ್ಲಿ ಪ್ರದರ್ಶಿಸುತ್ತಾರೆ. ಅಂದರೆ ಜನರ ಮುಂದೆ ತನ್ನ ಬಗ್ಗೆ ತಾನೇ ಹೇಳಿಕೊಳ್ಳುವುದು.
ಬಾಹ್ಯ ಮೌಲ್ಯಮಾಪನ (External Validation)
ತಮ್ಮ ಬಗ್ಗೆ ತಾವು ಅರಿಯದೆ ಸಾಮಾಜಿಕ ಮಾಧ್ಯಮದಲ್ಲಿ ಪಡೆಯುವ ಲೈಕ್ಸ್, ಕಾಮೆಂಟ್‌ಗಳು ಮತ್ತು ಫಾಲೋವರ್‌ಗಳ ಸಂಖ್ಯೆಯ ಆಧಾರದ ಮೇಲೆ ಅಳೆಯಲು ಪ್ರಾರಂಭಿಸುತ್ತಾರೆ. ಇದು ಅವರ ಆಂತರಿಕ ಸ್ಥಿರತೆಗೆ (Internal Stability) ಹಾನಿ ಮಾಡುತ್ತದೆ.
ಪ್ರದರ್ಶನಕ್ಕಾಗಿ ಬದುಕು:
ನಾನು ಯಾರು, ಎಂಬುದಕ್ಕಿಂತ, ನಾನು ಹೇಗಿರಬೇಕು ಎಂದು ಇತರರು ಬಯಸುತ್ತಾರೆ ಎಂಬ ಆಧಾರದ ಮೇಲೆ ತಮ್ಮ ಗುರುತನ್ನು ರೂಪಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರ ತಮ್ಮ ನಿಜವಾದ ಗುರುತು, ನಂಬಿಕೆ ಮತ್ತು ಉದ್ದೇಶಗಳು ಮರೆಯಾಗಿವೆ.
ಒಂಟಿತನ (Sense of Emptiness): ನನ್ನೊಂದಿಗೆ ಯಾರೂ ಇಲ್ಲ ಎಂಬ ಭಾವನೆ ಅವರಲ್ಲಿ ಹೆಚ್ಚಾಗಿ ಕಾಡುತ್ತಿದೆ.
ಆಳವಾದ ಸಂಬಂಧಗಳ ಕೊರತೆ (Lack of Depth in Relationships)
ಸುಲಭವಾಗಿ ಸ್ನೇಹಿತರಾಗುವುದು: ವರ್ಚುಯಲ್ ಸ್ನೇಹಿತರ ದೊಡ್ಡ ಸಂಖ್ಯೆ ಇದ್ದರೂ, ನೈಜ ಜೀವನದಲ್ಲಿ ವಿಶ್ವಾಸವಾಗಿರಬಲ್ಲ, ಭಾವನೆಗಳನ್ನು ಹಂಚಿಕೊಳ್ಳಬಲ್ಲ ಮತ್ತು ಭಾವನಾತ್ಮಕವಾಗಿ ಬೆಂಬಲ ನೀಡುವಂತಹ ಆಳವಾದ ಸಂಬಂಧಗಳ ಕೊರತೆ ಇರುತ್ತದೆ.
ಒಡನಾಟದ ಏಕಾಂತ (Lonely Togetherness): ಹತ್ತಿರದಲ್ಲಿ ಸ್ನೇಹಿತರಿದ್ದರೂ, ಎಲ್ಲರೂ ತಮ್ಮ ಫೋನ್‌ನಲ್ಲಿ ಮುಳುಗಿರುವುದು 'ಐಡೆಂಟಿಟಿ ಕ್ರೈಸಿಸ್' ಅನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತದೆ. ಏಕೆಂದರೆ ಭಾವನಾತ್ಮಕ ಸಂಪರ್ಕವಿಲ್ಲದೆ ಮಾನಸಿಕ ಬೆಂಬಲ ಸಿಗುವುದಿಲ್ಲ.
ಭಾವನಾತ್ಮಕ ಅಸ್ಥಿರತೆ:
ಈಗಿನ ಪೀಳಿಗೆಯ ಮಕ್ಕಳಲ್ಲಿ ಕೋಪ, ಆತಂಕ, ಒಂಟಿತನ, ದುಃಖ, ಬೇಸರ, ನಿರಾಸೆ ಮುಂತಾದ ಭಾವನಾತ್ಮಕ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವರಲ್ಲಿ ಸಂತೋಷದ ಕ್ಷಣಗಳು ಕೂಡ ಕಡಿಮೆಯಾಗುತ್ತಿವೆ.
ಸಂವಹನ ಕೊರತೆ: ಪೋಷಕರು ಕೆಲಸದ ಒತ್ತಡದಿಂದ ಅಥವಾ ಇತರೆ ಕಾರಣಗಳಿಂದ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯದಿರುವುದು ಒಂಟಿತನವನ್ನು ಹೆಚ್ಚಿಸುತ್ತದೆ.
ಭಾವನಾತ್ಮಕ ಬೆಂಬಲದ ಕೊರತೆ: ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸುರಕ್ಷಿತ ವಾತಾವರಣ ಸಿಗದಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.