
ಚಿತ್ರ: ಗೆಟ್ಟಿ
ತೂಕ ಎಂಬ ಪದ ಕೇಳಿದಾಕ್ಷಣ ನಮ್ಮ ಮನಸ್ಸು ಅದನ್ನು ಕಡಿಮೆ ಮಾಡುವತ್ತ ಹೋಗುತ್ತದೆ. ಆರೋಗ್ಯಕರ ತೂಕ ಹೆಚ್ಚಿಸುವುದು ಸುಲಭದ ವಿಚಾರವಲ್ಲ. ದೇಹ ದ್ರವ್ಯರಾಶಿಯ ಸೂಚ್ಯಾಂಕ (BMI) 18.5 ಕ್ಕಿಂತ ಕಡಿಮೆ ಇರುವವರು ಕಡಿಮೆ ತೂಕವಿರುತ್ತಾರೆ. ಇದು ರೋಗನಿರೋಧಕ ಶಕ್ತಿ, ಹಾರ್ಮೋನುಗಳ ಶಕ್ತಿ, ಮಾನಸಿಕ ಆರೋಗ್ಯ ಮತ್ತು ದೀರ್ಘಕಾಲೀನ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ.
ತೂಕದ ಹಾಗೂ ಕೊಬ್ಬಿನ ಹೆಚ್ಚಳ ಎರೆಡೂ, ಒಂದೇ ವಿಷಯವೇ? ಖಂಡಿತವಾಗಿಯೂ ಇಲ್ಲ. ಆರೋಗ್ಯಕರ ತೂಕದ ಹೆಚ್ಚಳವು ತುಪ್ಪ, ಸಕ್ಕರೆ ಹಾಗೂ ಎಣ್ಣೆ ಪದಾರ್ಥಗಳ ಸೇವನೆಯಿಂದ ಬರುವುದಿಲ್ಲ. ಬದಲಾಗಿ ದೇಹದ ದ್ರವ್ಯರಾಶಿಯಿಂದ ಬರಬೇಕು. ಸರಿಸುಮಾರು ಶೇ 70 ರಷ್ಟು ಸ್ನಾಯು ಹಾಗೂ ಶೇ 30ರಷ್ಟು ಆರೋಗ್ಯಕರ ಕೊಬ್ಬು ಇರುವುದು ಸಮತೋಲಿನವಾಗಿರುತ್ತದೆ.
ತೂಕವನ್ನು ಹೆಚ್ಚಿಸಲು ವೈಜ್ಞಾನಿಕ ಕ್ರಮಗಳು ಇಲ್ಲಿವೆ. ಅವುಗಳೆಂದರೆ,
ಪ್ರತಿದಿನ ವ್ಯಾಯಾಮ : ಪ್ರತಿದಿನ ವಿವಿಧ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ. ಇದರಿಂದಾಗಿ ದೇಹದ ಮೂಳೆ ಹಾಗೂ ಸ್ನಾಯುಗಳು ಸಧೃಢಗೊಳ್ಳುತ್ತವೆ.
ಪ್ರೋಟೀನ್ ಸೇವನೆ: ಪ್ರತಿದಿನ 1.2 ರಿಂದ 1.6 ಕಿ.ಗ್ರಾಂ ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸಬೇಕು. ಮೊಟ್ಟೆ, ಮಾಂಸ, ಕಾಳು ಹಾಗೂ ಮೊಸರನ್ನು ಸೇವಿಸುವುದು ಉತ್ತಮ.
ಕ್ಯಾಲೊರಿ ಮತ್ತು ಪೋಷಕಾಂಶಯುಕ್ತ ಆಹಾರ: ಖರ್ಜೂರ, ಓಟ್ಸ್, ಬಾಳೆಹಣ್ಣು, ಹಾಲು, ತುಪ್ಪ (ಮಿತವಾಗಿ) ವನ್ನು ಸೇವಿಸುವುದು. ಇದು ಬೆಳೆವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಆರೋಗ್ಯಕರ ಕರುಳು: ಶೇ 70ರಷ್ಟು ಪೋಷಕಾಂಶಗಳನ್ನು ಕರುಳಿನ ಮೂಲಕ ದೇಹ ಹೀರಿಕೊಳ್ಳುತ್ತದೆ. ಆದ್ದರಿಂದ ಕರುಳಿನ ಆರೋಗ್ಯದ ದೃಷ್ಟಿಯಿಂದ ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಿ.
ಉತ್ತಮ ನಿದ್ರೆ: ನಿದ್ರೆ ಬೆಳವಣಿಗೆಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ಸ್ನಾಯು ದುರಸ್ತಿಗೆ ಸಹಕಾರಿಯಾಗಿದೆ.
(ಡಾ. ಪಲಕ್ ದೇಂಗ್ಲಾ, ಮುಖ್ಯ ಭೌತ ಚಿಕಿತ್ಸೆ ತಜ್ಞರು, ಅಸ್ಟರ್ ಆರ್‌ವಿ ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.