ಚಿತ್ರ: ಗೆಟ್ಟಿ ಚಿತ್ರ
ನಿದ್ರೆ ಕೇವಲ ದೇಹದ ವಿಶ್ರಾಂತಿಗೆ ಅಲ್ಲ, ಅದು ಮೆದುಳಿನ ಪುನರ್ ಚೇತನ ಪ್ರಕ್ರಿಯೆಯಾಗಿದೆ ಎಂದು ಮನೋವಿಜ್ಞಾನ ಹೇಳುತ್ತದೆ. ಪ್ರತಿಯೊಬ್ಬರು ಮಲಗುವ ಮುನ್ನ ಈ 5 ಅಭ್ಯಾಸಗಳು ತಪ್ಪದೇ ಪಾಲಿಸಿ. ಇವು ನಿಮ್ಮ ಒತ್ತಡವನ್ನು ತಪ್ಪಿಸಬಲ್ಲವು. ಮನೋವಿಜ್ಞಾನ ಹೇಳುವ ಆ 5 ಅಭ್ಯಾಸಗಳು ಯಾವುವು ಎಂಬುದನ್ನು ಮನೋವಿಜ್ಞಾನ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ.
ಆಳವಾದ ಉಸಿರಾಟ: ನಿಧಾನವಾಗಿ ಉಸಿರೆಳೆದು ಬಿಡುವುದರಿಂದ ಮೆದುಳಿನ ಒತ್ತಡ ಸೃಷ್ಟಿಸುವ ಹಾರ್ಮೋನುಗಳು (stress hormones) ಕಡಿಮೆಯಾಗುತ್ತವೆ. ಇದು ಶಾಂತ ಭಾವನೆ ಮೂಡಿಸಲು ಸಹಾಕರಿಯಾಗುತ್ತದೆ.
ದಿನಚರಿ ಬರೆಯುವುದು: ಪ್ರತಿ ದಿನ ನಡೆದ ಘಟನೆಗಳನ್ನು ಬರೆಯುವುದರಿಂದ ಮನಸ್ಸಿನ ಭಾರ ಕಡಿಮೆಯಾಗುತ್ತದೆ ಎಂದು ಮನಃಶಾಸ್ತ್ರ ಹೇಳುತ್ತದೆ. ಇದರಿಂದ ಭಾವನೆಗಳು ಸರಾಗವಾಗಿ ಹರಿಯಲು (emotional release) ಸಾಧ್ಯವಾಗುತ್ತದೆ.
ಮೊಬೈಲ್‌ನಿಂದ ದೂರವಿರುವುದು: ಪರದೆ ಬೆಳಕು ನೀಲಿ ಬೆಳಕು (blue light) ಮೆದುಳಿನ ನಿದ್ರೆ ಹಾರ್ಮೋನ್ ಮೆಲಟೋನಿನ್ (melatonin) ಉತ್ಪತ್ತಿಯನ್ನು ತಡೆಯುತ್ತದೆ. ಇದರಿಂದ ನಿದ್ರಾಹೀನತೆ ಉಂಟಾಗಬಹುದು. ಆದ್ದರಿಂದ ನಿದ್ರೆಯ ಕನಿಷ್ಠ 1 ಗಂಟೆ ಮೊದಲು ಮೊಬೈಲ್ ಬಳಕೆ ತಪ್ಪಿಸುವುದು ಉತ್ತಮ.
ಕೃತಜ್ಞತೆ: ದಿನದಲ್ಲಿ ನಡೆದ ಎಲ್ಲಾ ಸಕಾರಾತ್ಮಕ ಸಂಗತಿಗಳನ್ನು ಮಲಗುವ ಮನ್ನ ಮೇಲುಕು ಹಾಕುವುದು. ಇದು ಆತ್ಮಸಂತೃಪ್ತಿಯ ಭಾವನೆ ನೀಡುತ್ತದೆ. ಇದರ ಜೊತೆಗೆ ಇತರರಿಂದ ಪಡೆದ ಸಹಾಯವನ್ನು ನೆನೆಯುವುದು.
ಶಾಂತವಾದ ವಾತಾವರಣ ಸೃಷ್ಟಿಸುವುದು: ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಮಂದ ಬೆಳಕು ಅಥವಾ ಲಘು ಸಂಗೀತವನ್ನು ಆಲಿಸುತ್ತಾ ಮಲಗುವುದರಿಂದ ದೇಹ ಮತ್ತು ಮನಸ್ಸು ವಿಶ್ರಾಂತ ಸ್ಥಿತಿಗೆ ಜಾರುತ್ತದೆ ಎಂದು ಮನಃಶಾಸ್ತ್ರ ಹೇಳುತ್ತದೆ.
ಮನೋವಿಜ್ಞಾನ ಹೇಳುವಂತೆ ಈ ಅಭ್ಯಾಸಗಳು ಮೆದುಳಿನ ವಿಶ್ರಾಂತ ಪ್ರತಿಕ್ರಿಯೆ ವ್ಯವಸ್ಥೆ (relaxation response system) ಅನ್ನು ಸಕ್ರಿಯಗೊಳಿಸುತ್ತವೆ. ಇವು ಒತ್ತಡ ಹಾರ್ಮೋನುಗಳನ್ನು ನಿಯಂತ್ರಿಸಿ ಸೆರೊಟೋನಿನ್ (serotonin) ಮತ್ತು ‘melatonin’ ಅನ್ನು ಸಮತೋಲನಗೊಳಿಸುತ್ತದೆ. ಇದರ ಪರಿಣಾಮದಿಂದಾಗಿ ಆಳವಾದ ನಿದ್ರೆ, ಧನಾತ್ಮಕ ಭಾವನೆ ಹಾಗೂ ಒತ್ತಡದ ಮಟ್ಟ ಕಡಿಮೆಯಾಗುತ್ತದೆ ಎಂದು ಮನೋವಿಜ್ಞಾನ ಪ್ರಾಧ್ಯಾಪಕಿ ಕಾವ್ಯಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.