
ಚಿತ್ರ: ಗೆಟ್ಟಿ
ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಏಕಾಗ್ರತೆ ಬಹಳ ಮುಖ್ಯ. ಇದರ ಹೊರತಾಗಿ ಕೆಲಸ ಮಾಡುವುದು ಅಸಾಧ್ಯ. ‘ಯಶಸ್ಸಿನ ಮೂಲ ಮಂತ್ರ ಏಕಾಗ್ರತೆ’ ಎಂದು ಮನೋವಿಜ್ಞಾನ ಹೇಳುತ್ತದೆ. ಇದನ್ನು ಹೆಚ್ಚಿಸಲು ಮನೋವಿಜ್ಞಾನದಲ್ಲಿ ಕೆಲವು ತಂತ್ರಗಳಿವೆ. ಅವುಗಳು ಏನು ಎಂಬುದನ್ನು ನೋಡೋಣ.
ಏಕಾಗ್ರತೆ ಎಂದರೆ ಏನು?
‘ಮನಸ್ಸನ್ನು ಒಂದು ಕಡೆ ಕೇಂದ್ರಿಕರಿಸಿ ಮಾಡಬೇಕಾದ ಕೆಲಸಕ್ಕೆ ನಮ್ಮ ಪೂರ್ಣ ಶಕ್ತಿಯನ್ನು ಬಳಸುವುದು.’
ಮನುಷ್ಯನಿಗೆ ಏಕಾಗ್ರತೆ ಏಕೆ ಮುಖ್ಯ?
ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು.
ಕೆಲಸದ ಗುಣಮಟ್ಟ ಹೆಚ್ಚಿಸಲು.
ಗಾಬರಿ ಹಾಗೂ ಕೆಲಸದ ವಿಳಂಬ ಕಡಿಮೆ ಮಾಡಲು.
ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಏಕಾಗ್ರತೆಯನ್ನು ಹೆಚ್ಚಿಸುವ ಮನೋವಿಜ್ಞಾನಿಕ ವಿಧಾನಗಳು:
ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವುದು: ನಮ್ಮ ಉಸಿರಾಟ ಕ್ರಿಯೆಯನ್ನು 1 ರಿಂದ 2 ನಿಮಿಷಗಳ ವರೆಗೆ ಗಮನಿಸುವುದು. ಇದು ಮಿದುಳಿನ ಚಂಚಲತೆ ಕಡಿಮೆ ಮಾಡಿ ಮನಸ್ಸನ್ನು ಒಂದೆಡೆ ಕೇಂದ್ರಿಕರಿಸಲು ಸಹಕಾರಿಯಾಗುತ್ತದೆ.
ಕೆಲಸ ಹಾಗೂ ವಿರಾಮ: ಉದಾಹರಣೆಗೆ 25 ನಿಮಿಷ ಕೆಲಸ ಮಾಡಿದರೆ, 5 ನಿಮಿಷ ವಿರಾಮ ತೆಗೆದುಕೊಳ್ಳಿ. ಇದರಿಂದಾಗಿ ಮಿದುಳು ‘ಸಣ್ಣ ಗುರಿಗಳ’ ಮೂಲಕ ತಾಳ್ಮೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.
ಮನಸ್ಸನ್ನು ನಿಮ್ಮ ಹಿಡಿತದಲ್ಲಿರಿಸಿ: ನಿಮ್ಮ ಮನಸ್ಸು ಬೇರೆಡೆಗೆ ಸೆಳೆದಾಗ ಅದನ್ನು ನಿಯಂತ್ರಿಸಿ. ‘ಮನಸ್ಸೆ ಈ ಕೆಲಸಕ್ಕೆ ಹಿಂತಿರುಗು’ ಎಂದು ಹೇಳುವುದರಿಂದ ಮನಸ್ಸು ನಿಧನವಾಗಿ ನಮ್ಮ ಹಿಡಿತಕ್ಕೆ ಸಿಗುತ್ತದೆ.
ಮಿದುಳಿನ ಒತ್ತಡ ಕಡಿಮೆ ಮಾಡುವುದು: ಒಂದು ಬಾರಿ ಒಂದು ಕೆಲಸ ಮಾತ್ರ ಮಾಡಿ. ಒಟ್ಟಿಗೆ ಅನೇಕ ಕೆಲಸಗಳನ್ನು ಮಾಡುವುದರಿಂದ ಮಿದುಳಿಗೆ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಒಂದು ಸಮಯಕ್ಕೆ ಒಂದು ಕೆಲಸ, ಇದು ಏಕಾಗ್ರತೆಯನ್ನು ಸ್ವಾಭಾವಿಕವಾಗಿ ಬಲಪಡಿಸುತ್ತದೆ.
5,4,3,2,1 ವಿಧಾನ: 5 ವಸ್ತುಗಳನ್ನು ನೋಡುವುದು. ಅಂದರೆ, 4 ವಸ್ತುಗಳನ್ನು ಸ್ಪರ್ಶಿಸುವುದು, 3 ಶಬ್ದಗಳನ್ನು ಕೇಳುವುದು, 2 ವಾಸನೆಗಳನ್ನು ಗುರುತಿಸುವುದು ಹಾಗೂ1 ರುಚಿಯನ್ನು ನೋಡುವುದು.
ನಿಮ್ಮ ಸುತ್ತಮುತ್ತಲಿನ ಯಾವುದೇ ವಸ್ತುವನ್ನು ಆರಿಸಿ, ಅದರ ಬಣ್ಣ, ಆಕಾರ, ಗಾತ್ರ ಮತ್ತು ವಿನ್ಯಾಸವನ್ನು ವಿವರವಾಗಿ ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬಹುದು. ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ.
ಸರಳ ಅಭ್ಯಾಸಗಳು:
ಬೆಳಿಗ್ಗೆ ಎದ್ದ ತಕ್ಷಣ 2 ನಿಮಿಷ ಮೌನವಾಗಿರುವುದು.
ಮೊಬೈಲ್ ನೋಟಿಫಿಕೇಶನ್‌ಗಳನ್ನು ನಿಯಂತ್ರಿಸುವುದು.
ಆ ದಿನ ಮಗಿಸಬೇಕಾದ ಕೆಲಸದ 3 ಮುಖ್ಯ ಗುರಿಗಳನ್ನು ಪಟ್ಟಿ ಮಾಡುವುದು.
ಕನಿಷ್ಟ 10 ನಿಮಿಷ ಓದುವುದು.
ಕೆಲಸದ ಸ್ಥಳವನ್ನು ಸ್ವಚ್ಛ ಹಾಗೂ ಸರಳವಾಗಿಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.