ಚಳಿಗಾಲದ ಸಮಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು. ಅದರಲ್ಲೂ ಮಧ್ಯವಯಸ್ಸಿನವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಾಗಿ ಒಳಗಾಗುತ್ತಾರೆ. ಅದಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ವೈದ್ಯರು ನೀಡಿದ ಮಾಹಿತಿ ಇಲ್ಲಿದೆ.
ಕಾರಣಗಳು
ಚಳಿಗಾಲದಲ್ಲಿ ಶೇ 10 ರಿಂದ15ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ವೇಳೆ ರಕ್ತ ಮಂದವಾಗಿದ್ದು, ನರಗಳು ಸಂಕುಚಿತವಾಗಿರುತ್ತವೆ. ರಕ್ತ ಸಂಚಾರ ನಿಧಾನವಾಗುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಚಳಿಯಿಂದ ದೇಹವನ್ನು ಬೆಚ್ಚಗಿಡಲೆಂದು ಧೂಮಪಾನ, ಮದ್ಯಪಾನ ಮಾಡುವುದು ಹೃದಯಘಾತಕ್ಕೆ ಕಾರಣವಾಗುತ್ತದೆ.
ಚಳಿಯಲ್ಲಿ ದೇಹದ ಚಲನವಲನ ಕಡಿಮೆ ಇರುವುದರಿಂದ, ನಿರಂತರ ವ್ಯಾಯಾಮ ಮಾಡದೆ ಇರುವುದು ಹೃದಯ ಸಂಬಂಧಿ ಸಮಸ್ಯೆಗೆ ಕಾರಣ.
ಮೊದಲೇ ಹೃದಯ ಸಂಬಂಧಿ ಕಾಯಿಲೆಗಳು ಇದ್ದರೆ, ಚಳಿಗಾಲದ ವೇಳೆ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಶ್ವಾಸಕೋಶದಲ್ಲಿ ಸೋಂಕು, ಆಮ್ಲಜನಕದ ಕೊರತೆ, ಅಭ್ಯಾಸವಿಲ್ಲದೇ ಒಂದೇ ಬಾರಿಗೆ ಭಾರ ಎತ್ತುವುದು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಅತಿಯಾದ ಜಂಕ್ ಫುಡ್ ಸೇವನೆಯೂ ಹೃದಯಕ್ಕೆ ಒಳ್ಳೆಯದಲ್ಲ.
ಹೃದಯ ಸಮಸ್ಯೆಯ ಲಕ್ಷಣಗಳು
ಉಸಿರು ಕಟ್ಟುವಿಕೆ
ತಲೆ ಸುತ್ತು
ಅಜೀರ್ಣ
ಭುಜ, ದವಡೆ ನೋವು
ಅತಿಯಾಗಿ ಬೆವರುವುದು
ನಿದ್ರಾಹೀನತೆ
ಹೀಗೆ ಆರೋಗ್ಯ ಕಾಪಾಡಿಕೊಳ್ಳಿ
ಆರೋಗ್ಯಕರ ಆಹಾರ ಸೇವನೆ ಮಾಡಿ
ಲಘು ವ್ಯಾಯಾಮ ಮಾಡುವುದು
ದಿನಕ್ಕೆ 3ರಿಂದ4 ಲೀಟರ್ ನೀರು ಕುಡಿಯುವುದು
ರಕ್ತದ ಒತ್ತಡ ಹೆಚ್ಚಿದ್ದರೆ ಉಪ್ಪಿನಾಂಶ ಇರುವ ಆಹಾರವನ್ನು ಕಡಿಮೆ ಸೇವನೆ ಮಾಡಬೇಕು
ಇಬ್ಬನಿ ಇರುವ ಜಾಗದಲ್ಲಿ ಜಾಸ್ತಿ ಓಡಾಡದಿರುವುದು
ಮದ್ಯಪಾನ, ಧೂಮಪಾನ ನಿಯಂತ್ರಿಸಬೇಕು
ಹಣ್ಣು, ತರಕಾರಿಗಳನ್ನು ಸೇವನೆ ಮಾಡಬೇಕು
ಇತರೆ ಆರೋಗ್ಯ ಸಮಸ್ಯೆಗಳಿವೆ ಎಂದಾದರೆ ವೈದ್ಯರು ಶಿಫಾರಸ್ಸು ಮಾಡಿದ ಔಷಧಿಗಳನ್ನೇ ತೆಗೆದುಕೊಳ್ಳಬೇಕು.
ಮಾಹಿತಿ: ಡಾ॥ ಶಿವಸ್ವಾಮಿ ಸೋಸಲೆ, ಬೆಂಗಳೂರಿನ ಜಯದೇವ, ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸೆ ಪ್ರಾಧ್ಯಾಪಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.