ADVERTISEMENT

ವಿಶ್ವದ ಅಗ್ರ 10 ಸ್ವಚ್ಛ ದೇಶಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2025, 8:46 IST
Last Updated 11 ನವೆಂಬರ್ 2025, 8:46 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) 2024ರ ವರದಿಯ ಪ್ರಕಾರ, ಗಾಳಿಯ ಗುಣಮಟ್ಟ, ನೀರಿನ ನೈರ್ಮಲ್ಯ, ಜೀವವೈವಿಧ್ಯತೆ, ಹವಾಮಾನ ಹಾಗೂ ಸುಸ್ಥಿರ ಪರಿಸರದ ಆಧಾರದ ಮೇಲೆ ಅತ್ಯುತ್ತಮ ರಾಷ್ಟ್ರಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಯಾವೆಲ್ಲಾ ರಾಷ್ರ್ಟಗಳು ಸ್ಥಾನ ಪಡೆದುಕೊಂಡಿವೆ ಹಾಗೂ ಭಾರತಕ್ಕೆ ಎಷ್ಟನೇ ಸ್ಥಾನ ಎಂಬ ಮಾಹಿತಿ ಇಲ್ಲಿದೆ. ‌

ಎಸ್ಟೋನಿಯಾ: 

ADVERTISEMENT

ಎಸ್ಟೋನಿಯಾ ತನ್ನ ಅರಣ್ಯ ಪ್ರದೇಶ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯಿಂದ ಜಾಗತಿಕವಾಗಿ ಮನ್ನಣೆಗಳಿಸಿದೆ. ಈ ದೇಶವು ಗಾಳಿ ಹಾಗೂ ನೀರಿನ‌ ಸ್ವಚ್ಚತೆಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಂಡಿದೆ ಎಂದು ವರದಿ ತಿಳಿಸಿದೆ. 75.7 ಅಂಕ ಗಳಿಸುವ ಮೂಲಕ ವಿಶ್ವದ ಉತ್ತಮ ನಗರವೆಂಬ ಖ್ಯಾತಿ ಪಡೆದಿದೆ. 

ಲಕ್ಸೆಂಬರ್ಗ್: 

ಲಕ್ಸೆಂಬರ್ಗ್ ದೇಶವು ಕಡಿಮೆ ಪರಿಸರ ಹಾನಿವುಂಟು ಮಾಡುವ ನವೀಕರಿಸಬಹುದಾದ ಇಂಧನ ಬಳಕೆ ಮಾಡುತ್ತಿದೆ. ಸ್ವಚ್ಛ ನಗರ ಪ್ರದೇಶಗಳಿಂದ ಕೂಡಿರುವ ಲಕ್ಸೆಂಬರ್ಗ್ 75.1 ಅಂಕ ಪಡೆಯುವ ಮೂಲಕ ವಿಶ್ವದ 2ನೇ ಉತ್ತಮ ದೇಶವಾಗಿದೆ. 

ಜರ್ಮನಿ: 

ಜರ್ಮನಿ ಇಂಧನಗಳ ಕಡಿಮೆ ಬಳಕೆ ಹಾಗೂ ಕಟ್ಟುನಿಟ್ಟಾದ ಹೊರಸೂಸುವಿಕೆ ಮಾನದಂಡಗಳ ಮೂಲಕ ಸ್ವಚ್ಚ ಪರಿಸರವನ್ನು ಕಾಯ್ದುಕೊಂಡಿದೆ. 74.5 ಅಂಕ ಪಡೆಯುವ ಮೂಲಕ ವಿಶ್ವದ 3ನೇಯ ಸ್ಥಾನದಲ್ಲಿದೆ. 

ಫಿನ್‌ಲ್ಯಾಂಡ್: 

ವಿಶಾಲವಾದ ಕಾಡು ಮತ್ತು ಶುದ್ಧ ನೀರಿನ ಸರೋವರಗಳೊಂದಿಗೆ ಫಿನ್‌ಲ್ಯಾಂಡ್ ಸುಸ್ಥಿರ ಅರಣ್ಯ ಮತ್ತು ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ ನೀಡುತ್ತದೆ. ಈ ದೇಶವು ಉತ್ತಮ ಗಾಳಿಯ ಗುಣಮಟ್ಟ ಮತ್ತು ಪರಿಸರ ಸ್ನೇಹಿ ನಗರ ಯೋಜನೆ ಹೊಂದುವ ಮೂಲಕ 73.8 ಅಂಕಗಳಿಸಿ ವಿಶ್ವದ 4ನೇ ಉತ್ತಮ ನಗರವಾಗಿದೆ. 

ಯುನೈಟೆಡ್ ಕಿಂಗ್‌ಡಮ್: 

ಕಳೆದ ದಶಕದಿಂದ ಯುಕೆ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಸಾಂಪ್ರದಾಯಿಕ ಶಕ್ತಿ ಮೂಲವಾದ ಪವನ ಶಕ್ತಿಯನ್ನು ಉತ್ತೇಜಿಸಿದೆ. ಮರುಬಳಕೆ ಯೋಜನೆಗಳನ್ನು ಜಾರಿ ಮಾಡಿ 72.2 ಅಂಕ ಗಳಿಸುವ ಮೂಲಕ ವಿಶ್ವದ 5ನೇ ಉತ್ತಮ ನಗರವಾಗಿದೆ.

 ಸ್ವೀಡನ್‌: 

ಸ್ವೀಡನ್‌ನಲ್ಲಿ ಜಲವಿದ್ಯುತ್ ಮತ್ತು ಪವನ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಕ್ರಮಗಳೊಂದಿಗೆ 70.3 ಅಂಕ ಪಡೆಯುವ ಮೂಲಕ ವಿಶ್ವದ 6ನೇ ಉತ್ತಮ ನಗರವಾಗಿದೆ.

ನಾರ್ವೇ:

ನಾರ್ವೆ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದಲ್ಲಿ ಬದ್ದತೆ ಸಾಧಿಸಿದೆ. ಜಲವಿದ್ಯುತ್ ಶಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಕೈಗಾರಿಕೆ ಹಾಗೂ ವಾಹನಗಳಿಂದ ಮಾಲಿನ್ಯಕಾರಕಗಳ ಹೊರಸೂಸುವಿಕೆಯ ಪ್ರಮಾಣ ಕಡಿಮೆ ಮಾಡಿದೆ. ಈ ಮೂಲಕ 69.9 ಅಂಕ ಪಡೆದು ವಿಶ್ವದ 7ನೇ ಉತ್ತಮ ನಗರವಾಗಿದೆ.

ಆಸ್ಟ್ರಿಯಾ : 

ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯ ಮೇಲೆ ಬಿಗಿಯಾದ ನಿಯಂತ್ರಣದ ಮೂಲಕ ಆಸ್ಟ್ರಿಯಾ ಸುಸ್ಥಿರ ಅಭಿವೃದ್ದಿ ಕಾಣುತ್ತಿದೆ. ಜನ ಸ್ನೇಹಿ ಪರಿಸರ ಯೋಜನೆಗಳ ಮೂಲಕ 68.9 ಅಂಕ ಪಡೆಯುವ ಮೂಲಕ 8ನೇ ವಿಶ್ವದ ಅತ್ಯುತ್ತಮ ರಾಷ್ಟವಾಗಿದೆ.

 ಸ್ವಿಟ್ಜರ್‌ಲ್ಯಾಂಡ್‌: 

ಸ್ವಿಟ್ಜರ್‌ಲ್ಯಾಂಡ್‌ ತನ್ನ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ದೃಢವಾದ ತ್ಯಾಜ್ಯ ನಿರ್ವಹಣೆ ಮತ್ತು ನೀರು ಸಂಸ್ಕರಣಾ ವ್ಯವಸ್ಥೆಗಳನ್ನು ಹೊಂದುವ ಮೂಲಕ 67.8 ಅಂಕ ಪಡೆದು ವಿಶ್ವದ 9ನೇ ಅತ್ಯುತ್ತಮ ದೇಶವಾಗಿದೆ. 

ಡೆನ್ಮಾರ್ಕ್:

ಡೆನ್ಮಾರ್ಕ್ ನವೀಕರಿಸಬಹುದಾದ ಇಂಧನ ಯೋಜನೆಗಳ ಮೂಲಗಳಾದ ಪವನ ಶಕ್ತಿಯ ಮೂಲಕ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ಕಡಿಮೆ ಕಾರ್ಬನ್‌ ಹೊರಸೂಸುವಿಕೆ ಹಾಗೂ ಮರುಬಳಕೆ ನೀತಿಗಳಿಂದ 67.7 ಅಂಕ ಗಳಿಸಿ ವಿಶ್ವದ 10ನೇ ಅತ್ಯುತ್ತಮ ದೇಶವಾಗಿದೆ.

ಈ ಪಟ್ಟಿಯಲ್ಲಿ ಭಾರತವು 27.6 ಅಂಕ ಪಡೆಯುವ ಮೂಲಕ 176 ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.