
ಎಐ ಚಿತ್ರ
ಹಕ್ಕಿಗಳ ಸಂರಕ್ಷಣೆಗೆ ಪಕ್ಷಿಧಾಮಗಳನ್ನು ಸ್ಥಾಪಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಲಕ್ಷಾಂತರ ಪಕ್ಷಿಗಳು ಹಿಂಡು ಹಿಂಡಾಗಿ ಭಾರತದ ವಿವಿಧ ಪಕ್ಷಿಧಾಮಗಳಿಗೆ ಭೇಟಿ ನೀಡುತ್ತವೆ. ಆ ಪೈಕಿ ಕರ್ನಾಟಕದಲ್ಲಿರುವ ಪಕ್ಷಿಧಾಮಗಳಿಗೂ ಭೇಟಿ ನೀಡುತ್ತವೆ. ಪ್ರವಾಸಿಗರಿಗೆ ಹಾಗೂ ಛಾಯಾಗ್ರಾಹಕರಿಗೆ ಪಕ್ಷಿಧಾಮಗಳು ಸ್ವರ್ಗವಿದ್ದಂತೆ. ಪ್ರವಾಸೋದ್ಯಮ ಇಲಾಖೆ ತಿಳಿಸಿರುವಂತೆ ರಾಜ್ಯದ ಪ್ರಮುಖ ಪಕ್ಷಿಧಾಮಗಳು ಯಾವುವು ಎಂದು ನೋಡೋಣ?
ಇದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕ್ಕಿನಲ್ಲಿದೆ. ಸೊರಬದಿಂದ 16 ಕಿಮೀ ದೂರದಲ್ಲಿರುವ ಗುಡವಿ ಪಕ್ಷಿಧಾಮ ಅಚ್ಚುಕಟ್ಟಾದ ಮತ್ತು ಸ್ವಚ್ಛವಾದ ಗುಡವಿ ಸರೋವರದ ಪಕ್ಕದಲ್ಲಿದೆ. ಈ ಪಕ್ಷಿಧಾಮದ ಲಿಟಲ್ ಕಾರ್ಮೊರೆಂಟ್, ಇಂಡಿಯನ್ ಕಾರ್ಮೊರೆಂಟ್ ಹಾಗೂ ಜಂಗಲ್ ಫೌಲ್ ಸೇರಿದಂತೆ ಹಲವು ವಲಸೆ ಹಕ್ಕಿ ನೆಲೆಯಾಗಿ ಪ್ರಸಿದ್ದಿ ಪಡೆದಿದೆ.
ಭೇಟಿ ನೀಡಲು ಸೂಕ್ತ ಸಮಯ: ಜುಲೈನಿಂದ ಅಕ್ಟೋಬರ್ ನಡುವೆ.
ಪ್ರಜಾವಾಣಿ ಚಿತ್ರ
ರಾಜ್ಯದ ಎರಡನೇಯ ಅತಿ ದೊಡ್ಡ ಪಕ್ಷಿಧಾಮವಾಗಿದೆ. ಅತಿ ಹೆಚ್ಚು ಜನರು ಭೇಟಿ ನೀಡುವ ಪಕ್ಷಿಧಾಮವೂ ಆಗಿದೆ. ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೋನಾಳ ಗ್ರಾಮದಲ್ಲಿದೆ. ವಲಸೆ ಹಕ್ಕಿಗಳಿಗೆ ಈ ಪಕ್ಷಿಧಾಮ ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ನೇರಳೆ ಹೆರಾನ್ ಮತ್ತು ಬಿಳಿ ಕುತ್ತಿಗೆಯ ಕೊಕ್ಕರೆಗಳು ಹೆಚ್ಚು ಆಕರ್ಷಣೆ ಮಾಡುತ್ತವೆ.
ಭೇಟಿ ನೀಡಲು ಸೂಕ್ತ ಸಮಯ: ನವೆಂಬರ್‌ನಿಂದ ಫೆಬ್ರುವರಿ ನಡುವೆ.
ಎಐ ಚಿತ್ರ
ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಮ್ ಅಲಿ ಅವರ ಮನವಿ ಮೇರೆಗೆ 1940 ರಲ್ಲಿ ರಂಗನತಿಟ್ಟು ಪಕ್ಷಿಧಾಮವನ್ನು ಘೋಷಿಸಲಾಯಿತು. ಈ ಪಕ್ಷಿಧಾಮ 0.67 ಚದರ ಕಿಮೀ ಪ್ರದೇಶದಲ್ಲಿ ಹರಡಿದೆ. ಕಾವೇರಿ ನದಿಯ ತಟದಲ್ಲಿರುವ ಈ ಪಕ್ಷಿಧಾಮಕ್ಕೆ ಯುರೋಪ್, ಅಮೆರಿಕಾ ಮತ್ತು ಸೈಬೀರಿಯಾದಿಂದ ಹಕ್ಕಿಗಳು ವಲಸೆ ಬರುತ್ತವೆ. ನದಿಯಲ್ಲಿ ದೋಣಿ ವಿಹಾರಕ್ಕೆ ಕೈಗೊಂಡು, ವಿವಿಧ ಜಾತಿಯ ಪಕ್ಷಿಗಳ ಆಕರ್ಷಕ ನೋಟ ಹಾಗೂ ಕೆಸರು ಮೊಸಳೆಗಳನ್ನು ವೀಕ್ಷಣೆ ಮಾಡಬಹುದು.
ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳಲ್ಲಿ ಪೇಂಟೆಡ್ ಕೊಕ್ಕರೆ, ಕಿಂಗ್‌ಫಿಶರ್, ಕಾರ್ಮೊರಂಟ್ಸ್, ಡಾರ್ಟರ್, ಹೆರಾನ್ಸ್, ರಿವರ್ ಟರ್ನ್, ಎಗ್ರೆಟ್ಸ್, ಇಂಡಿಯನ್ ರೋಲರ್, ಐಬಿಸ್, ಸ್ಪೂನ್‌ಬಿಲ್, ಗ್ರೇಟ್ ಸ್ಟೋನ್ ಪ್ಲೋವರ್ ಮತ್ತು ಪೆಲಿಕನ್‌ಗಳನ್ನು ಪ್ರಮುಖವಾದವು.
ಭೇಟಿ ನೀಡುವ ಸಮಯ: ರಂಗನತಿಟ್ಟು ಪಕ್ಷಿಧಾಮವು ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.
ಪ್ರಜಾವಾಣಿ ಚಿತ್ರ
ಅತಿ ಸುಂದರ ಹಾಗೂ ಸಮತೋಲಿತ ಪರಿಸರ ವ್ಯವಸ್ಥೆ ಇರುವ ಪಕ್ಷಿಧಾಮಗಳಲ್ಲಿ ಮಂಡಗದ್ದೆ ಪಕ್ಷಿಧಾಮವೂ ಒಂದು. ಈ ಪಕ್ಷಿಧಾಮ ಶಿವಮೊಗ್ಗದಲ್ಲಿದ್ದು, ದ್ವೀಪದಲ್ಲಿ ನೆಲೆಗೊಂಡಿದೆ. ಸುತ್ತಲೂ ದಟ್ಟ ಕಾಡುಗಳಿಂದ ಆವೃತವಾಗಿದೆ. ಇಲ್ಲಿಗೆ 5,000 ಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬರುತ್ತವೆ. ಮಧ್ಯಮ ಬೆಳ್ಳಕ್ಕಿ ಹಾಗೂ ಹಾವಿನ ಹಕ್ಕಿ ಇಲ್ಲಿನ ಪ್ರಮುಖ ಹಕ್ಕಿಗಳು.
ಭೇಟಿ ನೀಡುವ ಸಮಯ: ಜುಲೈ ನಿಂದ ಸೆಪ್ಟೆಂಬರ್ ನಡುವೆ.
ಪ್ರಜಾವಾಣಿ ಚಿತ್ರ
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿರುವ ಈ ಪಕ್ಷಿಧಾಮ 70 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇಲ್ಲಿನ ಕೆರೆಯೇ ಪಕ್ಷಿಧಾಮವಾಗಿ ರೂಪುಗೊಂಡಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಪಕ್ಷಿಗಳ ಪ್ರಭೇದ ನೆಲೆಯಾಗಿದೆ. ಕ್ರೌಂಚ ಪಕ್ಷಿಗಳಿಗೆ ಹೆಚ್ಚು ಪ್ರಸಿದ್ದಿ ಪಡೆದಿದೆ.
ಕರ್ನಾಟಕ ಹಲವು ಸುಂದರವಾದ ಪಕ್ಷಿಧಾಮಗಳಿಂದ ಕೂಡಿದೆ. ಈ ಮೇಲಿನ ಪಕ್ಷಿಧಾಮಗಳ ಭೇಟಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ.
ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.