
ಬಿಡುವಿಲ್ಲದ ಜೀವನಶೈಲಿ, ಕೆಲಸದ ಒತ್ತಡದಿಂದ ಬಳಲಿರುವ ಬೆಂಗಳೂರಿಗರು ವಾರಾಂತ್ಯದಲ್ಲಿ ನಗರದ ಸಮೀಪದಲ್ಲೇ ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ರಿಲ್ಯಾಕ್ಸ್ ಮಾಡಬಹುದಾಗಿದೆ. ಬೆಟ್ಟ, ಜಲಾಶಯ ಮುಂತಾದ ಅಂತಹ ಕೆಲ ಸ್ಥಳಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಗಳ ವಿವರ ಇಲ್ಲಿದೆ.
ನಂದಿ ಬೆಟ್ಟ: ನಂದಿ ದುರ್ಗ ಎಂದೂ ಕರೆಯಲ್ಪಡುವ ಈ ಬೆಟ್ಟ ಬೆಂಗಳೂರಿನಿಂದ 60 ಕಿ.ಮೀ ದೂರಲಿದೆ. ಖಾಸಗಿ ವಾಹನ ಅಥವಾ ಕ್ಯಾಬ್ ಮೂಲಕ ತಲುಪಬಹುದು.
ಚಿತ್ರ ಕೃಪೆ: karnataka tourism
ನಂದಿ ಬೆಟ್ಟದಿಂದ ಸ್ಕಂದಗಿರಿ , ಬ್ರಹ್ಮಗಿರಿ,ಚನ್ನಕೇಶವ ಬೆಟ್ಟಕ್ಕೆ ಭೇಟಿ ನೀಡಬಹುದು.
ರಾತ್ರಿ ಅಲ್ಲೆ ಉಳಿಯುವ ಯೋಜನೆ ಇದ್ದರೆ ಸಂಜೆ 5 ಗಂಟೆಗಿಂತ ಮೊದಲು ತಲುಪಿ www.kstdc.co ವೆಬ್ ಸೈಟ್ ಮೂಲಕ ಬುಕಿಂಗ್ ಮಾಡಬಹುದು.
ಶಿವಗಂಗೆ ಬೆಟ್ಟ : ಗವಿ ಗಂಗಾಧರ ಮತ್ತು ಹೊನ್ನದೇವಿ ದೇವಾಲಯ. ನೀರಿನ ಮೂಲಗಳು ಶಿವಗಂಗೆಯಲ್ಲಿ ಉಗಮವಾಗುತ್ತವೆ ಎಂದು ಹೇಳುತ್ತಾರೆ.
ಶಿವಗಂಗೆ ಬೆಟ್ಟವು ಬೆಂಗಳೂರು ಗ್ರಾಮಾಂತರದಲ್ಲಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರಿನಿಂದ ಇದು 50 ಕಿ.ಮೀ ದೂರದಲ್ಲಿದೆ.
ಚಿತ್ರ ಕೃಪೆ: ಪ್ರಜಾವಾಣಿ ಚಿತ್ರ
ಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ಮೂಲಕ ಹೋಗಬಹುದಾಗಿದೆ. ಶಿವಗಂಗೆ ಬೆಟ್ಟ ಅನೇಕ ಪವಾಡಕ್ಕೆ ಹೆಸರುವಾಸಿಯಾಗಿದೆ ಎಂದು ಭಕ್ತರ ನಂಬಿಕೆಯಾಗಿದೆ.
ಶ್ರೀನಿವಾಸ ಸಾಗರ ಅಣೆಕಟ್ಟು: ಈ ಸ್ಥಳವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದ್ದು, ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ.
ಚಿತ್ರ ಕೃಪೆ: ಪ್ರಜಾವಾಣಿ ಚಿತ್ರ
ಈ ಸ್ಥಳಕ್ಕೆ ಹೋಗಬೇಕಾದರೆ ಖಾಸಗಿ ವಾಹನದ ಮೂಲಕ ಹೋಗಬಹುದು.
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ – ಡಿಸೆಂಬರ್ ಸಮಯದಲ್ಲಿ ಹೋಗುವುದು ಸೂಕ್ತ ಎಂದು ಪ್ರವಾಸಿಗರ ಅಭಿಪ್ರಾಯವಾಗಿದೆ.
ಈಶ ಫೌಂಡೇಶನ್ :
ಚಿಕ್ಕಬಳ್ಳಾಪುರದಲ್ಲಿ ಇರುವ ಆದಿಯೋಗಿ ಪ್ರತಿಮೆ ನೋಡಿದ ಬಳಿಕ ಯೋಗೀಶ್ವರ ಲಿಂಗ ದೇವಾಲಯ ಮತ್ತು ನಾಗ ಮಂಟಪಕ್ಕೆ ಭೇಟಿ ನೀಡಬಹುದು.
ಚಿತ್ರ ಕೃಪೆ: ಪ್ರಜಾವಾಣಿ ಚಿತ್ರ
ಈಶ ಫೌಂಡೇಶನ್‌ಗೆ ಬೆಂಗಳೂರಿನಿಂದ ಕಾರು ಅಥವಾ ಟ್ಯಾಕ್ಸಿಯಲ್ಲಿ ಹೋಗಬಹುದು. ಬಿಎಂಟಿಸಿ ಪ್ರವಾಸಿ ಪ್ಯಾಕೇಜ್ ಮೂಲಕ ತಲುಪಬಹುದಾಗಿದೆ.
ಚಿಕ್ಕಬಳ್ಳಾಪುರದಲ್ಲಿರುವ ಈಶ ಫೌಂಡೇಶನ್ ಬೆಂಗಳೂರಿನಿಂದ 71 ಕಿ.ಮೀ ದೂರದಲ್ಲಿದೆ.
ಜಕ್ಕಲ ಮಡಗು ಅಣೆಕಟ್ಟು: ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರನ್ನು ಒದಗಿಸುವ ಒಂದು ಜಲಾಶಯವಾಗಿದೆ.
ಚಿತ್ರ ಕೃಪೆ: ಪ್ರಜಾವಾಣಿ ಚಿತ್ರ
ಅಣೆಕಟ್ಟು ತುಂಬಿದಾಗ ಕೋಡಿ ಹರಿಯುವುದನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಹೋಗುತ್ತಾರೆ.
ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಕಾರು ಅಥವಾ ಟ್ಯಾಕ್ಸಿ ಬಳಸಿ ಹೋಗಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.