ADVERTISEMENT

ವಾರಾಂತ್ಯದಲ್ಲಿ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 10:59 IST
Last Updated 22 ನವೆಂಬರ್ 2025, 10:59 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಅನೇಕರು ಕೆಲಸದ ಒತ್ತಡದ ನಡುವೆ ಮಾನಸಿಕ ಒತ್ತಡದ ನಿರ್ವಹಣೆಗಾಗಿ ವಾರಕೊಮ್ಮೆ ಪ್ರವಾಸಕ್ಕೆ ಹೋಗಲು ಮುಂದಾಗುತ್ತಾರೆ. ಬೆಂಗಳೂರಿನ ಟ್ರಾಫಿಕ್, ಜನಜಂಗುಳಿಯಿಂದ ಕಿರಿಕಿರಿಯಾಗಿದ್ದರೆ, ಬೆಂಗಳೂರಿಗೆ ಸಮೀಪದ ಕೆಲವು ಸ್ಥಳಗಳಿಗೆ ಪ್ರವಾಸ ಹೋಗಬಹುದು. ಆ ಸ್ಥಳಗಳು ಯಾವುವು? ತಲುಪಬಹುದು ಹೇಗೆ ಎಂಬುದನ್ನು ನೋಡೋಣ.

ಸ್ಕಂದಗಿರಿ: 

ADVERTISEMENT

ಸ್ಕಂದಗಿರಿ ಬೆಂಗಳೂರಿನ ಸಮೀಪದಲ್ಲಿರುವಂತಹ ಸುಂದರವಾದ ಚಾರಣ ಮಾಡುವ ಸ್ಥಳವಾಗಿದೆ. ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಬೆಟ್ಟದ ದಾರಿಯನ್ನು ಚಾರಣ ಮಾಡುವ ಮೂಲಕ ತಲುಪಬಹುದಾಗಿದೆ. ರಾತ್ರಿ ಚಾರಣಕ್ಕೂ ಇಲ್ಲಿ ಅವಕಾಶವಿದೆ. ಇಲ್ಲಿನ ಮಂಜು ಮುಸುಕಿದ ವಾತಾವರಣ ಪ್ರಕೃತಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೆಟ್ಟದ ತುದಿಯಲ್ಲಿ 18ನೇ ಶತಮಾನದ ಟಿಪ್ಪು ಸುಲ್ತಾನ್‌ನ ಕೋಟೆಯ ಅವಶೇಷಗಳಿವೆ. ಕುಟುಂಬದೊಂದಿಗೆ ಭೇಟಿ ನೀಡಲು ಈ ಸ್ಥಳ ಹೇಳಿ ಮಾಡಿಸಿದ ಜಾಗವಾಗಿದೆ. 

ಸಾವನದುರ್ಗ:

ಬೆಂಗಳೂರಿನಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಸಾವನದುರ್ಗ, ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಒಂದಾಗಿದೆ. ಇಲ್ಲಿ ವಿಶೇಷವಾಗಿ ಕರಿಗುಡ್ಡ ಹಾಗೂ ಬಿಳಿಗುಡ್ಡ ಎಂಬ ಎರಡು ಬೆಟ್ಟಗಳಿವೆ. ಚಾರಣ ಮಾಡಲು ಬಯಸುವ ಸಾಹಸಿಗರಿಗೆ ಸಾವನದುರ್ಗ ಬೆಟ್ಟವು ಉತ್ತಮ ಅನುಭವ ನೀಡುತ್ತದೆ. ಛಾಯಾಗ್ರಹಕರಿಗೆ ಹಾಗೂ ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಸಾವನದುರ್ಗಕ್ಕೆ ಚಾರಣ ಹೋಗ ಬಯಸುವವರು ಮುಂಚಿತವಾಗಿ ಬುಕಿಂಗ್ ಮಾಡಬೇಕಾಗುತ್ತದೆ. 

ಅಂತರಗಂಗೆ:

ಅಂತರಗಂಗೆ, ಕೋಲಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಅಂತರ ಗಂಗೆಯನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. ಬೆಂಗಳೂರಿನಿಂದ ಸರಿಸುಮಾರು 70 ಕಿ.ಮೀ ದೂರದಲ್ಲಿದೆ. ಇಲ್ಲಿನ ಕಲ್ಲಿನ ರಚನೆ ಹಾಗೂ ಗುಹೆಗಳು ಚಾರಣಿಗರಿಗೆ ಸಾಹಸಮಯವಾಗಿವೆ. ಇದಲ್ಲದೇ ಸ್ಥಳೀಯವಾಗಿ ಇತರೆ ದೇವಾಸ್ಥಾನಗಳಿಗೂ ಭೇಟಿ ನೀಡಬಹುದಾಗಿದೆ. 

ಬಿಳಿಕಲ್ ರಂಗಸ್ವಾಮಿ ಬೆಟ್ಟ:

ಕನಕಪುರ ಸಮೀಪದಲ್ಲಿ ಬಿಳಿಕಲ್ ರಂಗಸ್ವಾಮಿ ಬೆಟ್ಟವಿದೆ. ಬಂಡೆಗಳಿಗೆ ಹೆಸರು ವಾಸಿಯಾಗಿರುವ ಈ ಬೆಟ್ಟವು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಹಚ್ಚಹಸಿರಿನಿಂದ ಕೂಡಿದ ಕಾಡು ಹಾಗೂ ವನ್ಯಜೀವಿಗಳನ್ನು ನೋಡಬಹುದು. ಬೆಟ್ಟವನ್ನು ಆರಾಮವಾಗಿ ಕುಟುಂಬದೊಂದಿಗೆ ಏರಬಹುದು. ಸಂಜೆವರೆಗೂ ಕಾಲ ಕಳೆದು ಮರಳಬಹುದು. ಒಂದು  ದಿನ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. 

ಸಿದ್ದರ ಬೆಟ್ಟ: 

ತುಮಕೂರು ಜಿಲ್ಲೆಯಲ್ಲಿರುವ ಸಿದ್ದರಬೆಟ್ಟವನ್ನು ಸಂಜೀವಿನಿ ಪರ್ವತವೆಂದು  ಕರೆಯಲಾಗುತ್ತದೆ. ಆಧ್ಯಾತ್ಮಿಕ ಮತ್ತು ಚಾರಣ ಎರಡಕ್ಕೂ ಹೇಳಿ ಮಾಡಿಸಿದ ಸ್ಥಳವಾಗಿದೆ. ಬೆಂಗಳೂರಿನಿಂದ 100 ಕಿ.ಮೀ ಹಾಗೂ ತುಮಕೂರಿನಿಂದ 22 ಕಿ.ಮೀ ದೂರದಲ್ಲಿದೆ. ಇಲ್ಲಿ ಪ್ರಮುಖವಾಗಿ ಗುಹೆ ಹಾಗೂ ಔಷಧೀಯ ಸಸ್ಯಗಳ ಅನ್ವೇಷಣೆಯಲ್ಲಿ ತೊಡಗಬಹುದು. ಸ್ಥಳೀಯವಾಗಿ ಮಧುಗಿರಿ ಕೋಟೆಗೂ ಭೇಟಿ ನೀಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.